ಕಾಂಗ್ರೇಸ್ ವಿಶ್ವಾಸ ಕಳೆದುಕೊಂಡಿದೆ:ಕೋಟ
ಕುಂದಾಪುರ: ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಯಾವುದೇ ಗ್ಯಾರೆಂಟಿ ಕಾರ್ಡ್ ನೀಡದೇ ಸಂಧ್ಯಾ ಸುರಕ್ಷಾ ಭಾಗ್ಯಲಕ್ಷ್ಮೀ ಸೈಕಲ್ ಯೋಜನೆಯನ್ನು ಜಾರಿಗೆ ತಂದಿದೆ ಕಾಂಗ್ರೇಸ್ ನವರು ಇದುವರೆಗೆ ನೀಡಿದ ಆಶ್ವಾಸನೆಯನ್ನು ಈಡೇರಿಸಿದೆಯಾ ಎಂದು ಪ್ರಶ್ನಿಸಿದ ಕೋಟ ಶ್ರೀನಿವಾಸ ಪೂಜಾರಿಯವರು ಇತ್ತೀಚಿನ ದಿನಗಳಲ್ಲಿ ಕಾಂಗ್ರೇಸ್ ಜನರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದರು ಅವರು ಕೋಟೇಶ್ವರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂದು ಮಾತನಾಡಿದರು
ಬಿಜೆಪಿ ಸರಕಾರದ ಸಾಧನೆಗಳನ್ನು ಮನೆ ಮನೆಗೂ ಪಲುಪಿಸುವಲ್ಲಿ ಪ್ರತಿಯೊಬ್ಬ ಕಾರ್ಯಕರ್ತನು ಶ್ರಮಿಸಬೇಕೆಂದರು ಕುಂದಾಪುರ ಮಂಡಲದ ಅಧ್ಯಕ್ಷರಾದ ಶಂಕರ ಅಂಕದಕಟ್ಟೆಯವರು ಬಿಜೆಪಿ ಅಭ್ಯರ್ಥಿಯಾದ ಕಿರಣ್ ಕುಮಾರ್ ಕೊಡ್ಗಿಯವರ ಕಾರ್ಯಕ್ಷಮತೆ ಪ್ರಾಮಾಣಿಕತೆ ಮತ್ತು ಸರಳತೆಯ ಗುಣಗಾನ ಮಾಡಿದರು ವೇದಿಕೆಯಲ್ಲಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುರೇಶ್ ಶೆಟ್ಟಿ ಕುಯಿಲಾಡಿ ಬಿಜೆಪಿ ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿ ಇನ್ನಿತರ ಮುಖಂಡರು ಉಪಸ್ಥಿತರಿದ್ದರು ಸುರೇಶ ಮೂಡುಗೋಪಾಡಿ ಸ್ವಾಗತಿಸಿ ಸತೀಶ್ ಪೂಜಾರಿ ಕಾರ್ಯಕ್ರಮದ ನಿರೂಪಿಸಿದರು ಈ ಸಂದರ್ಭದಲ್ಲಿ ಅನೇಕ ಯುವಕರು ಬಿಜೆಪಿ ಸೇರ್ಪಡೆಗೊಂಡರು