‘ಉಡುಪಿ : ಮಿಸ್ಟರ್ ಬಿಲ್ಲವ’ ಸಂಘಟನಾ ಸಮಿತಿಯ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಮತ್ತು ಬಿಲ್ಲವರ ಸೇವಾ ಸಂಘ(ರಿ.) ಬನ್ನಂಜೆ ಇದರ ಜಂಟಿ ಸಹಯೋಗದಲ್ಲಿ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಮಾರ್ಗದರ್ಶನದಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಉಡುಪಿಯ ಬನ್ನಂಜೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ‘ಶಿವಗಿರಿ ಸಭಾಗೃಹ’ದಲ್ಲಿ ನಡೆದ ‘ಮಿಸ್ಟರ್ ಬಿಲ್ಲವ 2024’ ದೇಹದಾಢ್ಯ ಸ್ಪರ್ಧೆಯ ಸೀನಿಯರ್ಸ್ ವಿಭಾಗದಲ್ಲಿ ರಕ್ಷಿತ್ ಕೋಟ್ಯಾನ್ ಕಟಪಾಡಿ ‘ಮಿಸ್ಟರ್ ಬಿಲ್ಲವ 2024’ ಪ್ರಶಸ್ತಿ ಜಯಿಸಿದರು. ದೀರಜ್ ಕುಮಾರ್ ಉದ್ಯಾವರ ‘ರನ್ನರ್ ಅಪ್’ ಪ್ರಶಸ್ತಿಯನ್ನು ಪಡೆದರು.
ಇತರ 8 ಸ್ಥಾನಗಳನ್ನು ಕುಮಾರ್ ನಾಯ್ಕ್ ಭಟ್ಕಳ, ಪವನ್ ಉದ್ಯಾವರ, ಚೇತನ್ ಪೂಜಾರಿ ದ.ಕ., ಪ್ರವೀಣ್ ಕುಮಾರ್ ಶಿರ್ವ, ಮೋಹಿತ್ ಸಾಲ್ಯಾನ್ ಕಾಪು, ನಿತಿನ್ ಸಿ. ನಾಯ್ಕ್ ಭಟ್ಕಳ, ಪಿವಿನ್ ಬಂಟ್ವಾಳ, ಪ್ರಸಾದ್ ಜಿ. ಸಾಲ್ಯಾನ್ ಮಣಿಪುರ ಪಡೆದರು.
ಬಿಲ್ಲವರ ಸೇವಾ ಸಂಘ(ರಿ.) ಮಲ್ಪೆ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ ಅಧ್ಯಕ್ಷ ಜೆ. ನೀಲಕಂಠ, ಉಪಾಧ್ಯಕ್ಷ ಗಂಗಾಧರ್ ಎಮ್., ಕೋಶಾಧಿಕಾರಿ ದಿಲೀಪ್ ಕುಮಾರ್, ನಾರಾಯಣ ಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಉಡುಪಿ ಉಪಾಧ್ಯಕ್ಷೆ ವಿಜಯಾ ಜಿ. ಬಂಗೇರ, ಬಿಲ್ಲವರ ಸೇವಾ ಸಂಘ(ರಿ.) ಬನ್ನಂಜೆ ಅಧ್ಯಕ್ಷ ಮಾಧವ ಬನ್ನಂಜೆ, ಮಾಜಿ ಅಧ್ಯಕ್ಷ ಬಿ.ಬಿ. ಪೂಜಾರಿ, ಅಂತರಾಷ್ಟ್ರೀಯ ದೇಹದಾಢ್ಯ ಪಟು ಲವೀನ್ ಕೆ. ಮಂಗಳೂರು, ಚಾಂಪಿಯನ್ಶಿಪ್ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಸಾಲ್ಯಾನ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಉಪಾಧ್ಯಕ್ಷ ಅಶೋಕ್ ಬಂಗೇರ, ಕೋಶಾಧಿಕಾರಿ ಮಾರುತಿ ಜಿ. ಬಂಗೇರ, ಉಡುಪಿ ಡಿಸ್ಟ್ರಿಕ್ಟ್ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಕಾಮತ್, ರಾಷ್ಟ್ರೀಯ ತೀರ್ಪುಗಾರ ಉಮಾಮಹೇಶ್, ರಾಜ್ಯ ತೀರ್ಪುಗಾರ ವೆಂಕಟೇಶ್ ಕಾಮತ್, ಅಂತರಾಷ್ಟ್ರೀಯ ಕ್ರೀಡಾಪಟು ಅಶ್ವಿನ್ ಸನಿಲ್, ಪ್ರಮುಖರಾದ ರಾಧಾಕೃಷ್ಣ ಮೆಂಡನ್, ಉಮೇಶ್ ಸಾಲ್ಯಾನ್, ರಮೇಶ್ ಪೂಜಾರಿ, ಅಶೋಕ್ ಪೂಜಾರಿ, ಶ್ರೀಧರ್ ಪೂಜಾರಿ, ಜಗದೀಶ್ ಬಂಗೇರ, ಕರುಣಾಕರ್ ಬಂಗೇರ, ಮಲ್ಲಿಕಾರ್ಜುನ್, ಹೇಮಂತ್ ಪೂಜಾರಿ, ಕೀರ್ತನ್ ಗಂಗಾಧರ್, ತುಷಾರ್ ಮುಂತಾದವರು ಉಪಸ್ಥಿತರಿದ್ದರು
.