Home » ಶಾಲೆಗೆ ಬಾಂಬ್‌ ದಾಳಿ ಬೆದರಿಕೆ : ಯುವಕನ ವಿರುದ್ಧ ಪ್ರಕರಣ ದಾಖಲು
 

ಶಾಲೆಗೆ ಬಾಂಬ್‌ ದಾಳಿ ಬೆದರಿಕೆ : ಯುವಕನ ವಿರುದ್ಧ ಪ್ರಕರಣ ದಾಖಲು

by Kundapur Xpress
Spread the love

ಉಡುಪಿ : ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಬೆಂಗಳೂರು ಮೂಲದ ಯುವಕನೊಬ್ಬನ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಮವಾರ ವಿದ್ಯೋದಯ ಪಬ್ಲಿಕ್ ಶಾಲೆಯ ಈ-ಮೇಲ್‌ಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಅದರಲ್ಲಿ ಹೈದರಬಾದ್‌ನ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಸಿಗದಿದ್ದರೆ ಶಾಲೆಯ ಪ್ರಾಂಶುಪಾಲನ ತಲೆ ತೆಗೆಯುತ್ತೇವೆ ಎಂದು ಉಲ್ಲೇಖಿಸಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಂತ್ರಸ್ತೆಗೆ ನ್ಯಾಯ ಒದಗಿಸುವ ಉದ್ದೇಶದಿಂದ ಶಾಲಾ ಪಾಲಕರನ್ನು ಪ್ರತಿಭಟನೆಗೆ ಪ್ರಚೋದಿಸುವುದಕ್ಕಾಗಿ ಶಾಲೆಯಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆಯನ್ನು ಹಾಕಲಾಗಿದೆ. ಇದರ ಬಗ್ಗೆ ಮುಂದಿನ ಹಂತದ ತನಿಖೆಗಾಗಿ ಬೆಂಗಳೂರು ರಾಂಪುರದ ನಿವಾಸಿ ದಿ.ವಿಜ್ ಪಿ., ಆತನ ತಂದೆ ಪ್ರಭಾಕರ ಮತ್ತು ತಾಯಿ ಲಕ್ಷ್ಮಿ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

Related Articles

error: Content is protected !!