ಕುಂದಾಪುರ : ಕುಂದಾಪುರದ ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹೆಬ್ರಿಯಲ್ಲಿರುವ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹೆಬ್ರಿಯಲ್ಲಿರುವ ರೈತ ಸೇವಾ ಗ್ರಾಮೋದ್ಯೋಗ ಘಟಕಗಳಿಗೆ ಭೇಟಿ ನೀಡಿ, ಅಕ್ಕಿ, ಗೇರು ಬೀಜ ಹಾಗೂ ಪಶು ಆಹಾರ ಉತ್ಪಾದನ ಘಟಕಗಳಲ್ಲಿ ತಯಾರಾಗುವ ವಿವಿಧ ವಸ್ತುಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ವಾಣಿಜ್ಯ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದು, ಈ ವಿಭಾಗದ ಉಪನ್ಯಾಸಕರು ಸಹಕರಿಸಿದರು.