313
ಕುಂದಾಪುರ : ಮರ ತೆರವು ಕಾರ್ಯಚರಣೆ ವೇಳೆ ಇನ್ನೊಂದು ಮರ ಉರುಳಿದ್ದರಿಂದ ಬೈಂದೂರು ಶಾಸಕರು ಅಪಾಯದಿಂದ ಪಾರಾದ ಘಟನೆ ನಡೆದಿದೆ ಕುಂದಾಪುರ ತಾಲೂಕಿನ ಹಾಲಾಡಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವೊಂದನ್ನು ತೆರೆವುಗೊಳಿಸುವ ಸಂದರ್ಭ ಇನ್ನೊಂದು ಮರ ಬಿದ್ದು ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಹಾಗೂ ಬೆಂಬಲಿಗರು ಕೂದಲಳೆತೆಯ ಅಂತರದಲ್ಲಿ ಪಾರಾಗಿದ್ದಾರೆ
ಕಾರ್ಯನಿಮಿತ್ತ ಹಾಲಾಡಿ ಮಾರ್ಗವಾಗಿ ತೆರಳುತ್ತಿದ್ದ ಬೈಂದೂರು ಶಾಸಕ ಗುರುರಾಜ್ ಗಂಟಿ ಹೊಳೆ ಮರ ರಸ್ತೆಗೆ ಅಡ್ಡವಾಗಿ ಬಿದ್ದಿದ್ದರಿಂದ ತನ್ನ ಬೆಂಬಲಿಗರ ಸಹಕಾರದೊಂದಿಗೆ ತೆರವುಗೊಳಿಸುತ್ತಿರುವ ಸಂದರ್ಭ ಅದೇ ಜಾಗದಲ್ಲಿ ಇನ್ನೊಂದು ಮರ ಬೀಳುವುದನ್ನು ಕಂಡು ಬೆಂಬಲಿಗರು ಮತ್ತು ಗುರುರಾಜ್ ಗಂಟಿಹೊಳೆ ಪಕ್ಕಕ್ಕೆ ಓಡಿರುವುದರಿಂದ ಸಂಭವಿಸುವ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ
ವರದಿ:ಈಶ್ವರ್ ನಾವುಂದ

