ಕುಂದಾಪುರ : 94ಸಿ ಕಡತಗಳ ವಿಲೇವಾರಿ ವಿಚಾರವಾಗಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಬೈಂದೂರು ತಾಲ್ಲೂಕು ತಹಶೀಲ್ದಾರ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ 94ಸಿ ಕುರಿತಾಗಿ ಬಿರುಸಿನ ಮಾತುಕತೆ ನಡೆದಿದೆ.
ಸಕಾರಣವಿಲ್ಲದೆ 94ಸಿ ಕಡತಗಳು ವಿಲೇವಾರಿ ನಡೆಯದ ಬಗ್ಗೆ ಮಾಹಿತಿ ಪಡೆದ ಶಾಸಕರು, ಅನಗತ್ಯ ವಿಳಂಬ, ಗೊಂದಲದ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಅಧಿಕಾರಿಗಳು ತಡಬಡಾಯಿಸಿದ ಕಾರಣ ಮತ್ತಷ್ಟು ರೊಚ್ಚಿಗೆದ್ದ ಶಾಸಕರು, ಜನಸಾಮಾನ್ಯರ ಜೀವನದಲ್ಲಿ 94ಸಿ ಕಡತಕ್ಕೆ ಭಾರೀ ಮಹತ್ವ ಇದೆ. ನಾವು ಇದಕ್ಕಾಗಿಯೇ ಹತ್ತಿಪ್ಪತ್ತು ವರ್ಷ ಹೋರಾಡಿದ್ದೇವೆ.
ಫಲಾನುಭವಿಗಳನ್ನು ಕಾಯಿಸಿ ಕಾಯಿಸಿ ಕೊನೆಗೆ ದುಡ್ಡು ಕೊಟ್ಟರೆ ಮಾತ್ರ ಕಡತ ವಿಲೇವಾರಿ ಮಾಡುತ್ತೀರಿ ಎನ್ನುವುದು ನನಗೂ ಗೊತ್ತಿದೆ. ಆದರೆ ನನ್ನ ಅವಧಿಯಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ. ಇಷ್ಟು ಸಣ್ಣ ಕೆಲಸವನ್ನಾದರೂ ನಿಷ್ಠೆಯಿಂದ ಮಾಡಿ ಬಡವರಿಗೆ ಉಪಕಾರ ಮಾಡಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.