ಬೈಂದೂರು : ಹೊಸಂಗಡಿಯಿಂದ ಶಿವಮೊಗ್ಗ ಜಿಲ್ಲೆಯ ಗಡಿಯ ತನಕದ ಹುಲಿಕಲ್ ಘಾಟಿಯ ಇಕ್ಕೆಲ ಗಳಲ್ಲಿ ಅಪಾಯಕಾರಿ ಮರಗಳಿಂದ ಘಾಟಿ ರಸ್ತೆ ಹಾಳಾಗಿರುತ್ತದೆ.ಘಾಟಿಯಲ್ಲಿ ಕೆಲವೆಡೆ ಎರಡು ವಾಹನಗಳು ಚಲಿಸುವಷ್ಟು ವಿಶಾಲವಾದ ರಸ್ತೆ ಇಲ್ಲ. ಚರಂಡಿ ವ್ಯವಸ್ಥೆ ಹಾಗೂ ಕೆಲವು ಕಡೆ ತಡೆ ಗೋಡೆ ಇರುವುದಿಲ್ಲ ಹಾಗೂ ಇದ್ದ ಕಡೆ ದುರ್ಬಲ ಗೊಂಡಿವೆ. ಅಲ್ಲದೆ ಘಾಟಿ ಸಂಪರ್ಕಿಸುವ ರಸ್ತೆಯೂ ಅಭಿವೃದ್ಧಿ ಪಡಿಸುವುದು ಅಗತ್ಯ ವಿರುವುದಾಗಿದೆ.
ಈ ಬಗ್ಗೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿರುತ್ತಾರೆ. ಕ್ಷೇತ್ರದ ಕುಂದಾಪುರ ತಾಲೂಕು ತೀರ್ಥ ಹಳ್ಳಿ -ಕುಂದಾಪುರ ರಾಜ್ಯ ಹೆದ್ದಾರಿ 52 ರ ಕೀ.ಮಿ 46.45 ರಿಂದ 50.18 ರವರೆಗಿನ ಸುಮಾರು 11 ಕೀ.ಮಿ ರಸ್ತೆ ಅಭಿವೃದ್ಧಿ ಪಡಿಸಲು ರೂ. 39.50 ಕೋಟಿ ಅಂದಾಜಿಸಲಾಗಿದ್ದು ಪ್ರಸ್ತಾವನೆಯನ್ನು ತಯಾರಿಸಿ ಲೋಕೋಪಯೋಗಿ ಇಲಾಖೆ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗಳಿಗೆ ನೀಡಲಾಗಿದೆ. ಎಂದು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಪತ್ರಿಕಾ ಹೇಳಿಕೆ ನೀಡಿರುತ್ತಾರೆ

