ಬೈಂದೂರು : ಬೈಂದೂರು ತಾಲೂಕು ಪ್ರಜಾ ಸೌಧದಲ್ಲಿ 2025 ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆಯವರು ಮಾತನಾಡಿ ರಾಷ್ಟೀಯ ಹಬ್ಬಗಳಿಗೆ ತನ್ನದೇ ಆದ ಪ್ರಾಮುಖ್ಯತೆಗಳಿವೆ ಆದ ಕಾರಣ ಎಲ್ಲಾ ರಾಷ್ಟೀಯ ಹಬ್ಬಗಳ ಆಚರಣೆಯನ್ನು ಅತ್ಯಂತ ಶ್ರದ್ಧೆ ಹಾಗೂ ಆಸಕ್ತಿಯಿಂದ ಆಚರಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಅಧಿಕಾರಿಗಳು ತೆಗೆದು ಕೊಳ್ಳಬೇಕು ಯಾವುದೇ ಕಾರಣಕ್ಕೂ ರಾಷ್ಟೀಯ ಹಬ್ಬಗಳ ಆಚರಣೆ ಕಡೆಗಣನೆ ಸಲ್ಲದು ಎಂದು ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು
ಸ್ವಚ್ಛ ಹಾಗೂ ನಶಾ ಮುಕ್ತ ಗ್ರಾಮದ ಪರಿಕಲ್ಪನೆಯಡಿ ಸ್ವಾತಂತ್ರ್ಯೋತ್ಸವದ ಆಚರಣೆ
*ಈ ಬಾರಿಯ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ವಚ್ಛ ಗ್ರಾಮ ಹಾಗೂ ನಶಾ ಮುಕ್ತ ಗ್ರಾಮ ಹಿನ್ನಲೆಯಲ್ಲಿ ಆಚರಿಸಲು ಉದ್ದೇಶಲಾಗಿದ್ದು ಅದರಂತೆ ಬೈಂದೂರು ಈ ಎರಡು ವಿಷಯಗಳಲ್ಲಿ ಗುರಿ ಸಾಧಿಸಲು ಸಂಕಲ್ಪಿಸಲಾಗಿದ್ದು. ಅದರಂತೆ ತಾಲೂಕು ಆಡಳಿತ ಆರೋಗ್ಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ತಾಲೂಕಿನ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಆಗಸ್ಟ್ 1 ರಿಂದ ಮೊದಲ್ಗೊಂಡು ಜನ ಜಾಗೃತಿ ಕಾರ್ಯಕ್ರಗಳನ್ನು ಹಮ್ಮಿ ಕೊಳ್ಳುವುದರ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ಮರಣಿಯವಾಗಿಸುವ ಮೂಲಕ ನಿರ್ಧರಿತ ಗುರಿ ತಲುಪಲು ಅಧಿಕಾರಿಗಳು ಆಸಕ್ತಿ ವಹಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ ಬೈಂದೂರು ತಾಲೂಕು ತಹಸೀಲ್ದಾರ್ ರಾಮ ಚಂದ್ರಪ್ಪ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜ್ ಕುಮಾರ್ ಹಾಗೂ ಇನ್ನಿತರ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

