ಮಂಡ್ಯ : ಕಾಂಗ್ರೆಸ್ಗೆ ಭೂತ, ಪ್ರೇತ ಮೆಟ್ಟಿಕೊಂಡಿದೆ. ಅದು ಅಂತಿಂಥಾ ದೆವ್ವ ಅಲ್ಲ. ಟಿಪ್ಪುಸುಲ್ತಾನ್ ದೆವ್ವ ಮೆಟ್ಟಿಕೊಂಡಿದೆ, ಸಿದ್ದರಾಮಯ್ಯ ಅವರು ತನ್ನ ರಾಜಕೀಯ ಅವಸಾನಕ್ಕಾಗಿ ಹನುಮ ಧ್ವಜ ತೆಗೆದಿದ್ದಾರೆ. ಕೆರಗೋಡು ಗ್ರಾಮದಲ್ಲಿ ಮತ್ತೆ ಹನುಮ ಧ್ವಜ ಹಾರಾಡಬೇಕು. ಇಲ್ಲದಿದ್ದರೆ ಈ ಊರಿಗೆ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ಬರುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಎಚ್ಚರಿಸಿದರು. ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕೆರಗೋಡಿನಿಂದ ಪಾದಯಾತ್ರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಧ್ವಜ ತೆಗೆದ ಸರ್ಕಾರ ರಾಜಕೀಯವಾಗಿ ಭಸ್ಮವಾಗಬೇಕು. ಹನುಮನನ್ನು ಕೆಣಕಿ ಯಾರಾದರೂ ಉಳಿದಿದ್ದಾರಾ ? ಅದೇ ರೀತಿ ಈ ಕಾಂಗ್ರೆಸ್ ಸರ್ಕಾರವೂ ಹೆಚ್ಚು ದಿನ ಉಳಿಯುವುದಿಲ್ಲ. ಇದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಸೀಟು ಗೆಲ್ಲುತ್ತದೆ ಎಂಬುದರ ಮುನ್ಸೂಚನೆ ಎಂದು ಭವಿಷ್ಯ ನುಡಿದರು.