ಕೊಪ್ಪಳ: ಮೋದಿಯವರ ಅಲೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗುವುದು ಗ್ಯಾರಂಟಿ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 2.70 ಕೋಟಿ ವಾಹನಗಳ ಖರೀದಿ ಹಾಗೂ ಮಾರಾಟ ಆಗಿದೆ. ಅಯೋಧ್ಯೆ, ಕಾಶಿ, ಸೋಮನಾಥ ಕಾರಿಡಾರ್ ಮೂಲಕ ಸಾಂಸ್ಕೃತಿಕ ಪುನರುತ್ಥಾನ ಆಗಿದೆ. ಮೂಲಸೌಕರ್ಯ ಅಭಿವೃದ್ಧಿ. ರೈಲ್ವೆ ನಿಲ್ದಾಣಗಳ ಹಾಗೂ ವಿಮಾನ ನಿಲ್ದಾಣ ಆಗಿವೆ. ಸ್ವಾತಂತ್ರ್ಯ ಬಂದಾಗಿನಿಂದ 2014 ರವರೆಗೆ 74 ವಿಮಾನ ನಿಲ್ದಾಣ ಗಳಿದ್ದವು. ಹತ್ತು ವರ್ಷದಲ್ಲಿ 79 ವಿಮಾನ ನಿಲ್ದಾಣ ನಿರ್ಮಾಣವಾಗಿವೆ ಎಂದರು.
ಗತಿಶಕ್ತಿ ಯೋಜನೆಯಡಿ 100 ಲಕ್ಷ ಕೋಟಿ ಹೂಡಿಕೆ ಮಾಡಲಾಗಿದೆ. ಇದರಿಂದ ಸಂಘಟಿತ ಹಾಗೂ ಅಸಂಘಟಿತ ವಲಯದಲ್ಲಿ ಉದ್ಯೋಗ ಸೃಷ್ಟಿಸಲಾಗಿದೆ. ಮೋದಿ ಗ್ಯಾರೆಂಟಿ ಬದುಕನ್ನು ಬದಲಿಸಿದೆ. ಗುಣಮಟ್ಟದ ಜೀವನ ನಡೆಸುತ್ತಿದ್ದಾರೆ. ಸಾಮಾನ್ಯ ಜನರಿಗೂ ಕಡಿಮೆ ದರದಲ್ಲಿ ಮೊಬೈಲ್ ಡಾಟಾ ಸಿಗುವಂತೆ ಮಾಡಲಾಗಿದೆ. ಅಭಿವೃದ್ಧಿ ಹೊಂದಿದ ಸುರಕ್ಷಿತ ಭಾರತ ನಿರ್ಮಾಣ. ಮಾಡುವುದೇ ಬಿಜೆಪಿಯ ಗುರಿಯಾಗಿದೆ ಎಂದರು.