ಕುಂದಾಪುರ : ಕಳೆದ ಹಲವಾರು ವರ್ಷಗಳಿಂದ ಕಾಮರ್ಸ್ ವಿಭಾಗದಲ್ಲಿ ವೃತ್ತಿಪರ ಶಿಕ್ಷಣವಾಗಿರುವ ಸಿಎ/ಸಿಎಸ್/ಸಿಎಮ್‍ಎ ಅಧ್ಯಯನಕ್ಕೆ ಹೆಸರಾಗಿರುವ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿ-ರೀಚ್ ಕೋಚಿಂಗ್ ಅಕಾಡೆಮಿಯ ವತಿಯಿಂದ ಮೇ ತಿಂಗಳ 2ನೇ ತಾರೀಕಿನಿಂದ ಸಿಎ/ಸಿಎಸ್/ಸಿಎಮ್‍ಎಗೆ ಸಂಬಂಧಿಸಿದ ‘ಫೌಂಡೇಶನ್ ತರಗತಿಗಳು’ ಆರಂಭವಾಗಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಪ್ರಶಾಂತವಾದ ಶಿಸ್ತು ಬದ್ಧ ಕಾಲೇಜ್ ಕ್ಯಾಂಪಸ್, ನುರಿತ ಹಾಗೂ ಅನುಭವಿ ಅಧ್ಯಾಪಕ ವೃಂದ, ಕಡಿಮೆ ಶುಲ್ಕ, ನಿಗದಿತ ಸಮಯದಲ್ಲಿ ಎಲ್ಲಾ ವಿಷಯಗಳ ಬೋಧನೆ, ನಿರಂತರ ಚರ್ಚೆಗಳು, ಪೂರ್ವ ಸಿದ್ಧತಾ ಪರೀಕ್ಷೆಗಳು, ಪರೀಕ್ಷೆಗಳನ್ನು ಸುಲಭವಾಗಿ ಬರೆಯಲು ತರಬೇತಿಗಳು ಇತ್ಯಾದಿ ಈ ವಿದ್ಯಾಸಂಸ್ಥೆಯ ವೈಶಿಷ್ಟ್ಯಗಳಾಗಿವೆ.
ಸಿಎ/ಸಿಎಸ್/ಸಿಎಮ್‍ಎ ಫೌಂಡೇಶನ್ ತರಬೇತಿ ಮುಗಿಸಿ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ಮುಂದಿನ ಹಂತಗಳಾದ ಸಿ.ಎ. ಇಂಟರ್, ಸಿ.ಎಸ್. ಎಕ್ಸಿಕ್ಯುಟಿವ್, ಸಿ.ಎಮ್.ಎ. ಇತರ ತರಬೇತಿ-ತರಗತಿಗಳನ್ನು ಇಲ್ಲಿಯೇ ಮುಂದುವರಿಸಲು ಅವಕಾಶವಿದ್ದು, ಆಸಕ್ತ ವಿದ್ಯಾರ್ಥಿಗಳು ಕೂಡಲೇ ಕಾಲೇಜು ಕಛೇರಿಯನ್ನು ಸಂಪರ್ಕಿಸಬಹುದಾಗಿ ತಿಳಿಸಲಾಗಿದೆ.