ಕೋಟ : ಕಳೆದ ಸಾಲಿನ ಸೂರ್ಯನಾರಾಯಣ ಚಡಗ ಕಾದಂಬರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಡಾ.ಕಾರಂತ ಸಭಾಭವನದಲ್ಲಿ ನಡೆಯಿತು. ಪ್ರಶಸ್ತಿ ಸ್ವೀಕರಿಸಿದ ಸಂತೋಷ ಕುಮಾರ ಮೆಹಂದಳೆ, ಡಾ.ಶಾಂತಲಾ ಅವರು ಕೃತಿ ರಚನೆಯ ಹಿನ್ನೆಲೆ ಬಿಚ್ಚಿಟ್ಟರು. ತೀರ್ಪುಗಾರರ ಪರವಾಗಿ ಮಾತನಾಡಿದ ವಿಮರ್ಶಕ ಬೆಳಗೋಡು ರಮೇಶ ಭಟ್ಟ ಅವರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಲು ಕಾರಣವಾದ ಅಂಶವನ್ನು ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ನಾಡೋಜ ಕೆ.ಪಿ.ರಾಯರು ಕಾದಂಬರಿಯ ವಸ್ತುವಿನೊಂದಿಗೆ ಕೃತಕ ಬುದ್ಧಿಮತ್ತೆಯನ್ನು ಅನ್ವಯಿಸಿ ಮಾತನಾಡಿದರು. ನೀಲಾವರ ಸುರೇಂದ್ರ ಅಡಿಗರು ಸೂರ್ಯನಾರಾಯಣ ಚಡಗರ ಬಗ್ಗೆ ಮಾತ ನಾಡಿದರು. ಚಡಗರ ಪುತ್ರ ಶೇಷನಾರಾಯಣ ಚಡಗರು ಶುಭ ಹಾರೈಸಿದರು. ಪ್ರಶಸ್ತಿ ಪ್ರಾಯೋಜಕರಾದ ಡಾ.ಎನ್.ಭಾಸ್ಕರ್ ಆಚಾರ್ಯ ಸ್ವಾಗತಿಸಿದರು. ಡಾ.ಸಬಿತಾ ಆಚಾರ್ಯ ಪುಸ್ತಕಗಳನ್ನು ನೀಡಿ ಗೌರವಿ ಸಿದರು. ಗುಂಡ್ಮಿ ರಾಮಚಂದ್ರ ಐತಾಳ ಪ್ರಾರ್ಥನೆ ಹಾಡಿದರು. ಸ್ಪರ್ಧಾ ಸಮಿತಿಯ ಸಂಚಾಲಕ ಚಿತ್ರಪಾಡಿ ಉಪೇಂದ್ರ ಸೋಮಯಾಜಿ ವಂದಿಸಿದರು. ಮಹಾಲಕ್ಷ್ಮೀ ನಿರೂಪಿಸಿದರು.