Home » ಶ್ರೀ ಚಕ್ರಮ್ಮ ಸಭಾಭವನ ಉದ್ಘಾಟನಾ ಸಮಾರಂಭ : ಶಾಸಕ ಎ. ಕಿರಣ್ ಕೊಡ್ಗಿ ಭಾಗಿ
 

ಶ್ರೀ ಚಕ್ರಮ್ಮ ಸಭಾಭವನ ಉದ್ಘಾಟನಾ ಸಮಾರಂಭ : ಶಾಸಕ ಎ. ಕಿರಣ್ ಕೊಡ್ಗಿ ಭಾಗಿ

by Kundapur Xpress
Spread the love

ಕುಂದಾಪುರ: ಕಡಲೂರಿನ ಕೋಡಿ ಭಾಗದ ಶ್ರೀ ಚಕ್ರಮ್ಮ ದೇವಸ್ಥಾನ ಕೋಡಿಯಲ್ಲಿ ಕ್ಷೇತ್ರದ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಬಳಿ ನಿರ್ಮಿಸಲ್ಪಟ್ಟ ಶ್ರೀ ಚಕ್ರಮ್ಮ ಸಭಾಭವನದ ಉದ್ಘಾಟನಾ ಸಮಾರಂಭ ಮುಖ್ಯ ಅತಿಥಿಯಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಭಾಗವಹಿಸಿ ದೀಪವನ್ನು ಪ್ರಜ್ವಲಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು

ಈ ಕಾರ್ಯಕ್ರಮದಲ್ಲಿಗೌರವಾನ್ವಿತ ಅತಿಥಿ ಅಭ್ಯಾಗತರ ಉಪಸ್ಥಿತಿಯಲ್ಲಿ ಪರಮಪೂಜ್ಯ ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಸಾಂದೀಪನಿ ಸಾಧನಾಶ್ರಮ ಶ್ರೀಕ್ಷೇತ್ರ ಕೇಮಾರು ಮಠ ಇವರಿಂದ ಆಶೀರ್ವಚನ ಕಾರ್ಯಕ್ರಮ ನೆರವೇರಿತು ಕೇಮಾರು ಸ್ವಾಮೀಜಿ ಸಹಿತ ಗಣ್ಯರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

1,000 ಜನರ ಆಸನ ವ್ಯವಸ್ಥೆಯ ಸಭಾಭವನ :

ಆಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ, ಭವ್ಯವಾದ ಆಕರ್ಷಕವಾಗಿ ವಿನ್ಯಾಸ ರೂಪುಗೊಂಡ ಶ್ರೀ ಚಕ್ರಮ ಸಭಾಭವನದಲ್ಲಿ 1,000 ಜನರ ಆಸನದ ವ್ಯವಸ್ಥೆ ಇದೆ. 400 ಆಸನದ ವಿಶಾಲ ಭೋಜನ ಶಾಲೆ ಇದೆ. ಸುಸಜ್ಜಿತ ಪಾಕಶಾಲೆ ಮಾಡಲಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದ್ದು ಶುಚಿ-ರುಚಿಯಾದ ಊಟದ ವ್ಯವಸ್ಥೆ ಮಾಡಬಹುದು. ಹೂವಿನ ಅಲಂಕಾರದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. 

 

Related Articles

error: Content is protected !!