ಕುಂದಾಪುರ : ಕುಂದಾಪುರ ನಗರದ ಚಿಕ್ಕನಸಾಲು ರಸ್ತೆಯ ಮೊಗವೀರ ಭವನದ ಎದುರಿನ ಜೋಗಯ್ಯನ ಕಟ್ಟೆ ರಸ್ತೆಯಲ್ಲಿ ಅಕೇಶಿಯ ಮರವೊಂದು ರಸ್ತೆಗೆ ಅಡ್ಡಬಿದ್ದ ಪರಿಣಾಮ ಅಪಾರ ಹಾನಿಯುಂಟಾಗಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡು ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರ ನಗರವನ್ನು ಸಂಪರ್ಕಿಸುವ ಚಿಕ್ಕನಸಾಲು ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ
ನಿನ್ನೆ ಶುಕ್ರವಾರ ರಾತ್ರಿಯ ವೇಳೆಗೆ ಜೋಗಯ್ಯನ ಕಟ್ಟೆ ರಸ್ತೆಯ ಪದ್ಮನಾಭ ಕೋತ್ವಾಲ್ ರವರಿಗೆ ಸೇರಿದ ಜಾಗದಲ್ಲಿದ್ದ ಅಕೇಶಿಯಾ ಮರವು ಭಾರಿ ಗಾಳಿಗೆ ಅಡ್ಡ ಬಿದ್ದಿದ್ದರಿಂದ ಮೂರು ವಿದ್ಯುತ್ ಕಂಬಗಳು ಮುರಿದ್ದು ವಿದ್ಯುತ್ ತಂತಿಗಳು ಧರಗುರುಳಿದೆ ಮುರಿದುಬಿದ್ದ ಕಂಬಗಳನ್ನು ಕ್ರೇನ್ ಸಹಾಯದಿಂದ ತೆರವುಗೊಳಿಸಿ ಹೊಸ ಕಂಬವನ್ನು ನಿಲ್ಲಿಸುವ ನಿಟ್ಟಿನಲ್ಲಿ ಮೆಸ್ಕಾಂ ಅಧಿಕಾರಿಗಳು ಶ್ರಮವಹಿಸುತ್ತಿದ್ದು ಮರವನ್ನು ಕಡಿದು ಇನ್ನಷ್ಟೇ ತೆರವುಗೊಳಿಸಬೇಕಿದೆ ಹಾಗಾಗಿ ಚಿಕ್ಕನ ಸಾಲು ರಸ್ತೆಯಲ್ಲಿ ಸಂಚಾರವನ್ನು ನಿಷೇಧಿಸಲಾಗಿದ್ದು ಸಂಚಾರಿ ಠಾಣಾ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ
ಸಂಚಾರ ನಿಷೇಧದಿಂದ ಬಿಕೋ ಎನ್ನುತ್ತಿರುವ ಚಿಕ್ಕನಸಾಲು ರಸ್ತೆ


