Home » ಸಿಟಿ ಬಸ್‌ ನೇರ ಆಸ್ಪತ್ರೆಗೆ
 

ಸಿಟಿ ಬಸ್‌ ನೇರ ಆಸ್ಪತ್ರೆಗೆ

ವಿದ್ಯಾರ್ಥಿನಿಗೆ ಎದೆನೋವು

by Kundapur Xpress
Spread the love

ಮಂಗಳೂರು : ನಗರದ ಸಿಟಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜಿನ‌ ವಿದ್ಯಾರ್ಥಿನಿಯೊಬ್ಬಳಿಗೆ ಏಕಾಏಕಿ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು  ಹೃದಯಾಘಾತದ ಮುನ್ಸೂಚನೆ ಸಿಗುತ್ತಿದ್ದಂತೆ ಎಚ್ಚೆತ್ತುಕೊಂಡ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ದು ಅವರಿಗೆ ನೆರವಾಗುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ

13‌ ಎಫ್‌ ರೂಟ್ ನಂಬರ್ ಕೃಷ್ಣ ಪ್ರಸಾದ್ ಬಸ್ ಕುಳೂರು ಮಾರ್ಗವಾಗಿ ಚಲಿಸುತಿತ್ತು. ಅದರಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರೊಬ್ಬರಲ್ಲಿ ಎದೆ‌ನೋವು ಕಾಣಿಸಿಕೊಂಡಿತ್ತು. ಬಸ್ ಚಾಲಕ, ನಿರ್ವಾಹಕರಾದ ಗಜೇಂದ್ರ ಕುಂದರ್, ಮಹೇಶ್ ಪೂಜಾರಿ ಮತ್ತು ಸುರೇಶ್ ಅವರು ಕೂಡಲೇ ಎಚ್ಚೆತ್ತು ಎಲ್ಲಾ ಪ್ರಯಾಣಿಕರ ಸಮೇತ ಆಂಬುಲೆನ್ಸ್ ಮಾದರಿಯಲ್ಲಿ ಕಂಕನಾಡಿ ಆಸ್ಪತ್ರೆಗೆ ಕೊಂಡೊಯ್ದರು. ತತ್ ಕ್ಷಣ ವಿದ್ಯಾರ್ಥಿನಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಯಿತು ಎಂದು ತಿಳಿದು ಬಂದಿದೆ.

   

Related Articles

error: Content is protected !!