177
ಉಡುಪಿ : ದ.ಕ. ಹಾಗೂ ಉಡುಪಿ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ, ನೂತನ ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ. ದ.ಕ. ಜಿಲ್ಲಾಧಿಕಾರಿ ಮುತ್ತೈಮುಗಿಲನ್ ಸ್ಥಾನಕ್ಕೆ ಯುವ ಐಎಎಸ್ ಅಧಿಕಾರಿ ದರ್ಶನ್ ಎಚ್.ವಿ. ಅವರನ್ನು ನೇಮಿಸಲಾಗಿದೆ
ಮುತ್ತೈ ಮುಗಿಲನ್ 20230 ಜನವರಿಯಲ್ಲಿ ದ.ಕ. ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಎರಡೂವರೆ ವರ್ಷಗಳ ಕಾಲ ಇಲ್ಲಿ ಅಧಿಕಾರದಲ್ಲಿದ್ದರು. ಇವರನ್ನು ಬೆಂಗಳೂರಿನಲ್ಲಿ ನೋಂದಣಿ ಇಲಾಖೆಯ ಐಜಿ ಮತ್ತು ಸ್ಟಾಂಪ್ಸ್ ವಿಭಾಗದ ಕಮಿಷನರ್ ಆಗಿ ಹೊಸ ಹುದ್ದೆ ನೀಡಲಾಗಿದೆ:
ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ವರ್ಗಾವಣೆಗೊಳಿಸಲಾಗಿದೆ. ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಬೆಂಗಳೂರು ಆರ್‌ಡಿಪಿಆರ್ ಇ ಗವರ್ನನ್ಸ್ ನಿರ್ದೇಶಕಿ ಸ್ವರೂಪಾ ಟಿ ಕೆ ಅವರನ್ನು ಸರ್ಕಾರ ನೇಮಕಗೊಳಿಸಿದೆ.

