ಕೋಟ: ಜಿಲ್ಲೆಯ ಕರಾವಳಿ ಕಡಲಕಿನಾರೆಗಳು ಸಾಕಷ್ಟು ಕಡಲ್ಕೊರೆತಕ್ಕಿಡಾಗುತ್ತಿದ್ದು ಈ ಹಿನ್ನಲ್ಲೆಯಲ್ಲಿ ಆಯಾ ವ್ಯಾಪ್ತಿಯ ಕಡಲ್ಕೊರೆತ ಸ್ಥಳಗಳಿಗೆ ತಾತ್ಕಾಲಿಕ ತಡೆಗೋಡೆ ನಿರ್ಮಿಸುವ ಕುರಿತು ಸರಕಾರ ಈಗಾಗಲೇ 5ಕೋಟಿ ರೂ ಮಿಸಲಿರಿಸಿದ್ದು ಈ ಹಿನ್ನಲ್ಲೆಯಲ್ಲಿ ಕೋಡಿ ಗ್ರಾ.ಪಂ ವ್ಯಾಪ್ತಿಯ ಹೊಸಬೇಂಗ್ರೆ ಲೈಟ್ ಹೌಸ್ ಹಾಗೂ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮಣೂರು ಪಡುಕರೆ ವಿವಿಧ ಭಾಗಳಿಗೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಭೇಟಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯ ಇಂಜಿನಿಯರ್ ಡಯಾಸ್,ಎಡಬ್ಲ್ಯೂಡಿ ಶೋಭಾ,ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು ಮತ್ತಿತರರು ಇದ್ದರು.ಕೋಡಿ,ಕೋಟ ಕಡಲ್ಕೊರತ ಸ್ಥಳಗಳ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಭೇಟಿ ಪರಿಶೀಲಿಸಿದರು.ಮೀನುಗಾರಿಕಾ ಇಲಾಖೆಯ ಇಂಜಿನಿಯರ್ ಡಯಾಸ್,ಎಡಬ್ಲ್ಯೂಡಿ ಶೋಭಾ ಮತ್ತಿತರರು ಇದ್ದರು.