ಕೋಟ : ದಲಿತರು ಗುಡಿಗೋಪುರ ಸುತ್ತುವುದನ್ನು ಬಿಟ್ಟು ಸಮುದಾಯಕ್ಕೊಸ್ಕರ ದುಡಿದ ತ್ಯಾಗಿಗಳ ಸಮಾಧಿ ಸುತ್ತಲಿ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಬೆಂಗಳೂರು ಇದರ ಸಂಚಾಲಕ ಮಾವಳ್ಳಿ ಶಂಕರ್ ಸಮುದಾಯಕ್ಕೆ ಕರೆ ನೀಡಿದರು.
ಭಾನುವಾರ ಕೋಟದ ಸಿ ಎ ಬ್ಯಾಂಕ್ ಬಿಸಿ ಹೊಳ್ಳ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೋಟ ಹೋಬಳಿ ಹಮ್ಮಿಕೊಂಡ 25ನೇ ವರ್ಷದ ಉಚಿತ ನೋಟ್ ಬುಕ್ ,ಪ್ರತಿಭಾ ಪುರಸ್ಕಾರ ಅಕ್ಷರದಕ್ಕರೆ ಶೀರ್ಷಿಕೆಯಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದಲಿತ ಸಮುದಾಯಕ್ಕೆ ಸಂವಿಧಾನ ಒಂದಿಲ್ಲದಿದ್ದರೆ ಇಷ್ಟರ ಹೊತ್ತಿಗೆ ನಾವೆಲ್ಲ ಅದೋಗತಿ ಎಣಿಸಬೇಕಿತ್ತು ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನ ಕೆಳವರ್ಗದ ಜೀವನಕ್ಕೆ ಭದ್ರ ಬುನಾದಿ ನೀಡಿದೆ ಶಿಕ್ಷಣದಿಂದ ಕ್ರಾಂತಿ ನಿರ್ಮಿಸಲು ಸಾಧ್ಯವಿದೆ ಎಂದು ಘಂಟಾಘೋಷವಾಗಿ ಕರೆ ನೀಡಿದ ಅವರು ಈ ಬಗ್ಗೆ ಸಮುದಾಯದ ಪೋಷಕರು ಜಾಗೃತರಾಗಿ ಶಿಕ್ಷಣ ನೀಡಲು ಕರೆ ನೀಡಿದರು.
ಆಗಿನ ಕಾಲದಲ್ಲೆ ಜಾತಿ ವ್ಯವಸ್ಥೆಯ ಕಟ್ಟುಪಾಡು ದಲಿತ ಸಮುದಾಯವನ್ನು ಅದೋಗತಿಗೆ ತಳ್ಳುವಂತೆ ಮಾಡಿತು ಮೇಲ್ವರ್ಗದ ಜನ ತಮ್ಮ ಸಮುದಾಯವನ್ನು ಹೀನರಾಗಿ ಕಾಣುತ್ತಿದ್ದರು ಆದರೆ ಇಂದು ಪ್ರತಿಯೊಬ್ಬರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಸರಕಾರಿ ಶಾಲೆಗಳನ್ನೆ ಆಯ್ಕೆಮಾಡಿ
ಆಂಗ್ಲ ಮಾಧ್ಯಮದ ವ್ಯಾಮೂಹ ಬಿಡಿ ಪ್ರಸ್ತುತ ಕನ್ನಡ ಮಾಧ್ಯಮ ಸರ್ವ ಶ್ರೇಷ್ಠತೆಯನ್ನು ಪಡೆಯುತ್ತಿದೆ.ಅತಿ ಹೆಚ್ಚು ಅಂಕ ಗಳಿಸುವ ಕೇಂದ್ರ ಸ್ಥಾನವಾಗಿ ಸರಕಾರಿ ಶಾಲೆಗಳು ಗುರುತಿಸಲ್ಪಟ್ಟಿದೆ.ಶಿಕ್ಷಣ ವ್ಯವಸ್ಥೆಯಲ್ಲಿ ಒಂದು ಪಠ್ಯವಾಗಿ ಆಂಗ್ಲ ವ್ಯವಸ್ಥೆಯ ಬಗ್ಗೆ ಆಗಿನ ಮುಖ್ಯಮಂತ್ರಿಗಳ ಗಮನ ಸೆಳೆದು ಅದರ ಕಾರ್ಯಗತಕ್ಕೆ ಮೂಲವಾಗಿದ್ದೇವೆ.ಈ ಮೂಲಕ ಸರಕಾರಿ ಶಾಲೆಗಳ ಅವನತಿ ಕ್ಷೀಣಿಸಿವಂತೆ ಮಾಡಿದ್ದೇವೆ,ಕನ್ನಡ ಮಾಧ್ಯಮ ತೊಟ್ಟಿಲು ಅದರೆ ಆಂಗ್ಲ ಮಾಧ್ಯಮ ಮೆಟ್ಟಿಲಾಗಿ ತಮ್ಮ ಏಳ್ಗತಿಗೆ ತಕ್ಕಂತೆ ಬಳಸಿಕೊಳ್ಳಿ ಎಂದರು.ಇಡೀ ದೇಶದಲ್ಲಿ ಸಮಾನಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು ಆಗ ಮಾತ್ರ ಸಮಾನತೆ ಬರಲು ಸಾಧ್ಯವಿದೆ ಈ ದಿಸೆಯಲ್ಲಿ ಕೋಟ ಹೋಬಳಿ ಸಂಘಟನೆ ಒಂದು ಹೆಜ್ಜೆ ಮುಂದಿರಿಸಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಇದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಇದೇ ವೇಳೆ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹಾಗೂ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ರವರನ್ನು ಸನ್ಮಾನಿಸಲಾಯಿತು. ವಿಶೇಷ ಪ್ರತಿಭಾ ಪುರಸ್ಕಾರದ ಭಾಗವಾಗಿ ಕೋಟ ಸಿ ಎ ಬ್ಯಾಂಕ್ ಅಧ್ಯಕ್ಷ ಡಾ.ಕೆ.ಕೃಷ್ಣ ಕಾಂಚನ್,ಯುವ ಭಾಗವತ ನವೀನ್ ಕೋಟ,ಯಕ್ಷ ಸಾಧಕಿ ಲಿಖಿತಾ ಗಿಳಿಯಾರು ಇವರುಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಸಮುದಾಯದ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ವಿತರಿಸಲಾಯಿತು.
ಅಧ್ಯಕ್ಷತೆಯನ್ನು ದಸಂಸ ಕೋಟ ಹೋಬಳಿ ಸಂಚಾಲಕ ನಾಗರಾಜ್ ಪಡುಕರೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ದ.ಸಂ.ಸ ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್,ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ್ ಕುಮಾರ್,ರಾಜ್ಯ ಸಮಿತಿ ಸಂಚಾಲಕಿ ವಸಂತಿ ಶಿವಾನಂದ,ಜಿಲ್ಲಾ ಸಂಚಾಲಕ ಶಾಮರಾಜ್ ಬಿರ್ತಿ,ವಾಸುದೇವ ಮುದ್ದೂರ್,ಗೌರವ ಉಪಸ್ಥಿತಿಯಲ್ಲಿ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನ ಮನೆ,ಬೈಂದೂರು ಸಂಚಾಲಕ ನಾಗರಾಜ್ ಉಪ್ಪುಂದ,ಬ್ರಹ್ಮಾವರ ಸಂಚಾಲಕ ಶ್ರೀನಿವಾಸ ವಡ್ಡರ್ಸೆ,ಜಿಲ್ಲಾ ಸಂಚಾಲಕ ಎನ್.ಎ ನೇಜಾರ್ ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ಶ್ಯಾಮಸುಂದರ್ ತೆಕ್ಕಟ್ಟೆ ಸ್ವಾಗತಿಸಿದರು. ಜಿಲ್ಲಾ ಸಂಚಾಲಕ ನ್ಯಾಯವಾದಿ ಟಿ.ಮಂಜುನಾಥ್ ಗಿಳಿಯಾರು ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕ ಮಂಜುನಾಥ್ ಕೆ.ಎಸ್.ಸಂತೋಷ್ ಕುಮಾರ್ ಕೋಟ,ನಾಗರಾಜ್ ಗುಳ್ಳಾಡಿ ನಿರ್ವಹಿಸದರು.ಜಿಲ್ಲಾ ಸಮಿತಿ ಸದಸ್ಯ ಕುಮಾರ್ ಕೋಟ ವಂದಿಸಿದರು.
ಕೋಟದ ಸಿ ಎ ಬ್ಯಾಂಕ್ ಬಿಸಿ ಹೊಳ್ಳ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೋಟ ಹೋಬಳಿ ಹಮ್ಮಿಕೊಂಡ 25ನೇ ವರ್ಷದ ಉಚಿತ ನೋಟ್ ಬುಕ್ ,ಪ್ರತಿಭಾ ಪುರಸ್ಕಾರ ಅಕ್ಷರದಕ್ಕರೆ ಶೀರ್ಷಿಕೆಯಡಿ ಕಾರ್ಯಕ್ರಮದಲ್ಲಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್‍ರವರನ್ನು ಸನ್ಮಾನಿಸಲಾಯಿತು. ದ.ಸಂ.ಸ ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್,ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ್ ಕುಮಾರ್,ರಾಜ್ಯ ಸಮಿತಿ ಸಂಚಾಲಕಿ ವಸಂತಿ ಶಿವಾನಂದ, ಜಿಲ್ಲಾ ಸಂಚಾಲಕ ನ್ಯಾಯವಾದಿ ಟಿ.ಮಂಜುನಾಥ್ ಗಿಳಿಯಾರು ಮತ್ತಿತರರು ಇದ್ದರು.