Home » ದಲಿತ ಸಮುದಾಯ ಹೋರಾಟದ ತಳಹದಿಯ ಮೂಲಕ ಮಂಚೂಣಿಗೆ – ಸುಂದರ್ ಮಾಸ್ತರ್
 

ದಲಿತ ಸಮುದಾಯ ಹೋರಾಟದ ತಳಹದಿಯ ಮೂಲಕ ಮಂಚೂಣಿಗೆ – ಸುಂದರ್ ಮಾಸ್ತರ್

by Kundapur Xpress
Spread the love

ಕೋಟ: ದಲಿತ ಸಂಘಟನೆ ಇಂದು ನಿನ್ನೆಯ ಇತಿಹಾಸವಲ್ಲ ತನ್ನ ಚಳುವಳಿಯ ಮೂಲಕ ಸಮುದಾಯದ ಏಳುಬೀಳಿಗೆ ಸದಾ ಶ್ರಮಿಸಿ ಮುಂಚೂಣಿಗೆ ತಂದಿರಿಸಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಹೇಳಿದರು.
ಭಾನುವಾರ ಕೋಟ ಸಿ ಎ ಬ್ಯಾಂಕ್ ಬಿ.ಸಿ ಹೊಳ್ಳ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಕೋಟ ಹೋಬಳಿ ಆಶ್ರಯದಲ್ಲಿ ೨೬ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಅಕ್ಷರದಕ್ಕರೆ -೨೦೨೫ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದಲಿತ ಸಮುದಾಯ ಯಾವುದೇ ಕ್ಷೇತ್ರದಲ್ಲೂ ಹಿಂದೆ ಬಿದ್ದಿಲ,ಸಾಕಷ್ಟು ಹೋರಾಟದ ಮೂಲಕ ಸಮುದಾಯ ಜನರಿಗೆ ನ್ಯಾಯ ಒದಗಿಸಿದೆ,ಶಿಕ್ಷಣದಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳವ ಯೋಜನೆ ಯೋಜನೆ ಕರಾರುವಾಕ್ಕಾಗಿ ದಲಿತ ಸಮುದಾಯ ಆದ್ಯತೆ ನೀಡಿ ಶೈಕ್ಷಣಿಕ ಕ್ರಾಂತಿ ಪಸರಿಸಿ ಇಂದು ಬಹು ಕ್ಷೇತ್ರದಲ್ಲಿ ಸಮುದಾಯ ಬಾಂದವರು ಗುರುತಿಸಿಕೊಂಡಿದ್ದಾರೆ.ಇದು ಸಮುದಾಯ ಅಭಿವೃದ್ಧಿಯ ಸಂಕೇತ ಎಂದು ಬಣ್ಣಿಸಿದರು.
ಇದೇ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಭಾರ್ಚನೆ ಗೈಯಲಾಯಿತು.ಸಮುದಾಯದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಲ್ಲಿಸಲಾಯಿತು ಸಮುದಾಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ದಸಂಸ ಕೋಟ ಹೋಬಳಿ ಸಂಚಾಲಕ ನಾಗರಾಜ್ ಪಡುಕರೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್,ಕೋಟ ಆರಕ್ಷಕ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ಪಿ,ಕೋಟ ಸಹಕಾರ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್,
ದಸAಸ ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ,ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮಸುಂದರ್ ತೆಕ್ಕಟ್ಟೆ, ಕುಂದಾಪುರ ತಾಲ್ಲೂಕು ಸಂಚಾಲಕ ರಾಜು ಬೆಟ್ಟಿನಮನೆ,ಕೋಟ ಪಂಚಾಯತ್ ಸದಸ್ಯೆ ಶಾಂತಾ,ಬೇಳೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಪವಿತ್ರ,ಸಂಘಟನೆಯ ಪ್ರಮುಖರಾದ ಕುಮಾರ್ ಕೋಟ, ಸುರೇಶ್ ಹಕ್ಲಾಡಿ,ಶಿವರಾಜ್ ಬೈಂದೂರು ಉಪಸ್ಥಿತರಿದ್ದರು. ದಸಂಸ ಜಿಲ್ಲಾ ಪ್ರಧಾನಸಂಚಾಲಕ ಟಿ.ಮಂಜುನಾಥ್ ಗಿಳಿಯಾರು ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಕೋಟ ಹೋಬಳಿ ಸಂಚಾಲಕರಾದ ಪ್ರಭಾಕರ್ ಪಡುಕರೆ ನಿರೂಪಿಸಿದರು.

 

Related Articles

error: Content is protected !!