ಬೈಂದೂರು : ಬೈಂದೂರಿನ ಯೋಜನಾ ನಗರ ನಿವಾಸಿಯಾದ ಹೊಸಾಡ್ ಸುಬ್ರಾಯ ಶೇರುಗಾರ್ ರವರು ಇಂದು ಮುಂಜಾನೆ 5.30 ರ ವೇಳೆಗೆ ತನ್ನ ನಿಧನ ಹೊಂದಿದರು ಅವರಿಗೆ 92 ವರ್ಷ ವಯಸ್ಸಾಗಿತ್ತು
ಅವರು ಬೈಂದೂರು ಕಾಂಗ್ರೇಸ್ ಕಾರ್ಯಕರ್ತರಾಗಿ ನಾಯಕರಾಗಿ ಅಂದಿನ ಬೈಂದೂರು ಪುರಸಭೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಉತ್ತಮ ವಾಗ್ಮಿಗಳಾಗಿಯೂ ಗುರುತಿಸಿಕೊಂಡ ಅವರು ವಿವಿಧ ಧಾರ್ಮಿಕ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರು
ಇಂದು ಬೆಳಿಗ್ಗೆ ಅವರು ವಯೋಸಹಜವಾಗಿ ದೈವಾಧೀನರಾಗಿದ್ದು.ಅವರು ಧರ್ಮಪತ್ನಿ ಶ್ರೀಮತಿ ಪಾರ್ವತಿ ಪಟವಾಲ್, ಪುತ್ರ ಖ್ಯಾತ ಹೃದಯ ತಜ್ಞರಾದ ಶ್ರೀ ಡಾ. ಹೆಚ್. ಪ್ರಭಾಕರ್, ಸುಧಾಕರ್ ಹಾಗೂ ಪುತ್ರಿಯರಾದ ಪ್ರೇಮ.ಸುಜಾತರವರನ್ನು ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ
ಅವರ ನಿಧನಕ್ಕೆ ಬೆಂಗಳೂರಿನ ರಾಮರಾಜ ಕ್ಷತ್ರಿಯ ಸೇವಾ ಸಂಘ ಹಾಗೂ ಬೈಂದೂರಿನ ರಾಮ ಕ್ಷತ್ರಿಯ ಸಂಘದ ಸದಸ್ಯರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ