356
ನೀರಿನ ಚರಂಡಿಗೆ ಬಿದ್ದು ವ್ಯಕ್ತಿ ಸಾವು
ಉಡುಪಿ : ಇಲ್ಲಿನ ಮಠದಬೆಟ್ಟು ಎಂಬಲ್ಲಿ ಕಾಲುಸಂಕದಿಂದ ಆಕಸ್ಮಿಕವಾಗಿ ಜಾರಿ ಮಳೆ ನೀರು ಹರಿಯುವ ಚರಂಡಿಗೆ ಬಿದ್ದು 33 ವರ್ಷದ ವ್ಯಕ್ತಿ ಒಬ್ಬರು ಮೃತಪಟ್ಟಿದ್ದಾರೆ
ಮೃತಪಟ್ಟವರನ್ನು ಬೈಂದೂರು ಮೂಲದ ಸತೀಶ್ (33 ವರ್ಷ) ಎಂದು ಗುರುತಿಸಲಾಗಿದ್ದು ಈತ ಉಡುಪಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ ಬುಧವಾರ ಮಧ್ಯಾಹ್ನದಿಂದ ಸತೀಶ್ ನಾಪತ್ತೆಯಾಗಿದ್ದು ಗುರುವಾರ ಆತನ ಶವ ಮಳೆ ನೀರು ಹರಿಯುವ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ಮೃತದೇಹವನ್ನು ಪತ್ತೆ ಹಚ್ಚಲು ಉಡುಪಿಯ ಮುಳುಗು ತಜ್ಙರಾದ ಈಶ್ವರ್ ಮಲ್ಪೆಯವರು ಶ್ರಮ ವಹಿಸಿದ್ದಾರೆ ಮೃತ ದೇಹವನ್ನು ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಇಡಲಾಗಿದೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

