ಕುಂದಾಪುರ : ಬೈಂದೂರು ಉಪ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸಿದ ಮಡಾಮಕ್ಕಿ ಕೆ. ಶಂಕರ್ ಶೆಟ್ಟಿಯವರು ಅಲ್ಪಕಾಲದ ಅಸೌಖ್ಯದಿಂದ ನಿನ್ನೆ ಶುಕ್ರವಾರ ನಿಧನ ಹೊಂದಿದರು
ಕುಂದಾಪುರದ ರಾಮ ಮಂದಿರ ಹತ್ತಿರದ ಸಿದ್ದನಾಯ್ಕನ ರಸ್ತೆಯಲ್ಲಿರುವ ಅವರ ಸ್ವಗೃಹದಲ್ಲಿ ಅವರ ಸಹೋದ್ಯೋಗಿಗಳಿಗೆ ಸ್ನೇಹಿತರಿಗೆ ಹಾಗೂ ಬಂಧು ಬಳಗದವರಿಗೆ 29.07.2023 ರ ಇಂದು ಶನಿವಾರ ಬೆಳಗ್ಗೆ 9 ಗಂಟೆಯ ತನಕ ಅವರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ನಂತರ ಅವರ ಹುಟ್ಟುರಾದ ಮಡಾಮಕ್ಕಿಗೆ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಗುತ್ತದೆ