ಉಡುಪಿ: ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಕೇಶ ಕಿದಿಯೂರು ನಿವಾಸಿ ಬೇಬಿ ಪೂಜಾರ್ತಿ (67 ವರ್ಷ) ಇವರು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಇವರು ಪತಿ ಸುಂದರ ಪೂಜಾರಿಯವರು ಭದ್ರಾವತಿಯ ಐಟಿಐ ಬಳಿ ಸುಧೀರ್ಘ ಅವಧಿಗೆ ನಡೆಸುತ್ತಿದ್ದ ಹೋಟೆಲ್ ಉದ್ಯಮದಲ್ಲಿ ಸಹಕರಿಸುತ್ತಿದ್ದರು. ಮೃತರು ನಾಲ್ವರು ಹೆಣ್ಣು ಮಕ್ಕಳು ಮತ್ತು ಬಂಧು ವರ್ಗವನ್ನು ಅಗಲಿದ್ದಾರೆ.