Home » ಅನಾರೋಗ್ಯದಿಂದ ಮಹಿಳೆ ಮೃತ್ಯು
 

ಅನಾರೋಗ್ಯದಿಂದ ಮಹಿಳೆ ಮೃತ್ಯು

by Kundapur Xpress
Spread the love

ಕುಂದಾಪುರ : ಅನಾರೋಗ್ಯದಿಂದ ಮಹಿಳೆಯೋರ್ವಳು ಶೌಚಾಲಯದ ಬಳಿ ಬಿದ್ದು ಮೃತಪಟ್ಟ ಘಟನೆ ಕುಂದಾಪುರ ಸಮೀಪದ ಮೂಡುಗೋಪಾಡಿಯಲ್ಲಿ ನಡೆದಿದೆ. ಜಯಂತಿ (61ವರ್ಷ) ಮೃತಪಟ್ಟ ದುರ್ದೈವಿ. ಜಯಂತಿ ಅವರು ಮೂಡುಗೋಪಾಡಿಯಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಗಳಾದ ಪ್ರಗತಿ ಅವರೊಂದಿಗೆ ವಾಸ ಮಾಡಿಕೊಂಡಿದ್ದರು. ಕಳೆದ 2-3 ದಿನಗಳಿಂದ ಜಯಂತಿ ಅವರ ಮನೆಯಿಂದ ವಿಪರೀತ ವಾಸನೆ ಬರುತ್ತಿರುವುದಾಗಿ ಸ್ಥಳೀಯರು ಜಯಂತಿ ಅವರ ಅಣ್ಣ ಕೋಟತಟ್ಟುವಿನ ಜಯಕುಮಾರ್‌ ಮಾಹಿತಿ ನೀಡಿದ್ದರು. ಅವರು ಮನೆಗೆ ಭೇಟಿ ನೀಡಿದಾಗ ಜಯಂತಿ ಅವರ ಮೃತದೇಹವು ಮನೆಯ ಒಳಗಿನ ಶೌಚಾಲಯದ ಬಳಿ ಕೊಳೆತ ಸ್ಥಿತಿಯಲ್ಲಿತ್ತು. ಪ್ರಗತಿ ಮನೆಯ ಕಿಚನ್‌ನಲ್ಲಿ ಅಸ್ವಸ್ತ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ. ಜಯಂತಿ ಅವರು ಅನಾರೋಗ್ಯದಿಂದ 3-4 ದಿನಗಳ ಹಿಂದೆ ಮೃತಪಟ್ಟಿರಬಹುದೆಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

   

Related Articles

error: Content is protected !!