ಮಣಿಪಾಲ: ಮೊದಲು ಪಾಕಿಸ್ತಾನ ಆಕ್ರಮಿತ ಭಾರತವನ್ನು ವಶಪಡಿಸಿಕೊಳ್ಳುವುದು, ನಂತರ ಪಾಕಿಸ್ತಾನವೂ ಸೇರಿದಂತೆ ಅಖಂಡ ಭಾರತ ಸ್ಥಾಪನೆ ಮಾಡುವುದು ಬಿಜೆಪಿ ಸರ್ಕಾರದ ಗುರಿಯಾಗಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಅವರು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ನಡೆದ ಪ್ರಬುದ್ಧರ ಚಿಂತನಾ ಗೋಷ್ಠಿಯ ನಂತರ ನಡೆದ ಸಂವಾದದಲ್ಲಿ ಮಾತನಾಡಿದರು.ಈಗಾಗಲೇ ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರುವ ಪ್ರಕ್ರಿಯೆ ಆರಂಭವಾಗಿದೆ. ಅಲ್ಲಿರುವ ಜನರು ತಮ್ಮನ್ನು ಭಾರತದಲ್ಲಿರುವ ಕಾಶ್ಮೀರಕ್ಕೆ : ಸೇರಿಸುವಂತೆ ಆಂದೋಲನ ಶುರು ಮಾಡಿದ್ದಾರೆ. ಬಹಳ ಬೇಗ ಅಖಂಡ ಭಾರತದ ಕನಸು ನನಸಾಗುತ್ತದೆ ಎಂದವರು ಹೇಳಿದರು.
ಬಲಶಾಲಿಯಾಗಿರುವವರನ್ನು ಮಾತ್ರ ಜನರು ಪ್ರೀತಿಸುತ್ತಾರೆ, ತಾಕತ್ತು ಇಲ್ಲದವರು ಎಷ್ಟೇ ಶಾಂತಿಯ ಬಗ್ಗೆ ಮಾತನಾಡಲಿ ಅವರಿಂದ ಶಾಂತಿಸ್ಥಾಪನೆ ಸಾಧ್ಯವಾಗುವುದಿಲ್ಲ. ದೇಶದಲ್ಲಿ ಶಾಂತಿ ಸ್ಥಾಪನೆ ಹೇಡಿಯಿಂದ ಸಾಧ್ಯವಿಲ್ಲ. ಭಾರತವೀಗ ಬಲಶಾಲಿಯಾಗಿದೆ. ಆದ್ದರಿಂದಲೇ ಪಾಕಿಸ್ಥಾನಕ್ಕೆ ಭಾರತದತ್ತ ನೋಡುವ ಮೋದಿ ಧೈರ್ಯವಾಗುತ್ತಿಲ್ಲ, • ಚೀನಾ ಎಷ್ಟೇ ಶಕ್ತಿಶಾಲಿಯಾಗಿದ್ದರೂ ಅದಕ್ಕೆ ನೇತೃತ್ವದ ಭಾರತದ ರ ಭಾರತದ ಶಕ್ತಿಯ ಅರಿವಾಗಿದೆ, ಆದ್ದರಿಂದ ಚೀನಾ ಕೂಡ ಭಾರತದತ್ತ ಕಣ್ಣೆತ್ತಿ ನೋಡುತ್ತಿಲ್ಲ ಎಂದರು.
10 ವರ್ಷಗಳಲ್ಲಿ ಮೋದಿ ತೋರಿಸಿದ್ದು ಟ್ರೈಲರ್ ಮಾತ್ರ, ಪೂರ್ಣ ಸಿನೆಮಾ ಮುಂದಿನ 5 ವರ್ಷಗಳಲ್ಲಿ ನೋಡಲಿದ್ದೇವೆ ಎಂದವರು ಹೇಳಿದರು.ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ಕುಮಾರ್ಕುಂದಾಪುರ, ದಕ ಜಿಲ್ಲಾಧ್ಯಕ್ಷ ಸತೀಶ್ ಕಂಪಲ, ಶಾಸಕ ಯಶಪಾಲ್ ಸುವರ್ಣ, ಉಡುಪಿ ಚಿಕ್ಕಮಗಳೂರು ಉಸ್ತುವಾರಿ ನವೀನ್ ಶೆಟ್ಟಿ ಕುತ್ಯಾರು ವೇದಿಕೆಯಲ್ಲಿದ್ದರು. ಬಿಜೆಪಿ ಸಾಮಾಜಿಕ ಜಾಲತಾಣ ಉಸ್ತುವಾರಿ ವಿನೋದ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು, ಜಿಲ್ಲಾ ಪ್ರ.ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ವಂದಿಸಿದರು