Home » ಕಾರ್ಮಿಕ ಹರ್ತಟ್ಟು ಮಂಜುನಾಥ ಪೂಜಾರಿಗೆ ಸಹಾಯಹಸ್ತ
 

ಕಾರ್ಮಿಕ ಹರ್ತಟ್ಟು ಮಂಜುನಾಥ ಪೂಜಾರಿಗೆ ಸಹಾಯಹಸ್ತ

ಕಾರ್ಮಿಕ ದಿನಾಚರಣೆ

by Kundapur Xpress
Spread the love

ಕೋಟ : ಕೂಲಿ ಕಾರ್ಮಿಕರಾದ ಹರ್ತಟ್ಟು ಮಂಜುನಾಥ ಪೂಜಾರಿಯವರು ಮೇ 01 ಕಾರ್ಮಿಕ ದಿನಾಚರಣೆಯ ಪ್ರಯುಕ್ತ, ಕೂಲಿ ಕೆಲಸ ಮಾಡುವ ಸಂಧರ್ಭದಲ್ಲಿ ಆಯಾ ತಪ್ಪಿ ಬಿದ್ದು ಮೂಳೆ ಮೂರಿತಕ್ಕೆ ಒಳಗಾದ ಚಂದ್ರ ಆಚಾರ್ ಬಾರಿಕೆಯವರಿಗೆ 5.000ರೂಪಾಯಿ ಧನಸಹಾಯವನ್ನು ನೀಡಿದರು.
ಈ ಸಂಧರ್ಭದಲ್ಲಿ ಹಲವಾರು ವರ್ಷಗಳಿಂದ ಕಾರ್ಮಿಕ ದಿನಾಚರಣೆಯ ಪ್ರಯುಕ್ತ ಕೂಲಿ ಕಾರ್ಮಿಕರಿಗೆ ಧನಸಹಾಯವನ್ನು ಮಾಡುವ ಮಂಜುನಾಥ ಪೂಜಾರಿ ಹರ್ತಟ್ಟು ಇವರನ್ನು ಬಾರಿಕೆರೆಯ ಗ್ರಾಮಸ್ಥರ ಪರವಾಗಿ ರತ್ನಾಕರ ಪೂಜಾರಿ ಬಾರಿಕೆರೆ ಪುಷ್ಪ ನೀಡಿ ಕೃತಜ್ಞತೆ ಸಲ್ಲಿಸಿದರು.
ಕೋಟ ಸಿ.ಎ. ಬ್ಯಾಂಕ್‌ನ ನಿರ್ದೇಶಕ ರಂಜಿತ್ ಕುಮಾರ್ ಬಾರಿಕೆರೆ, ಬಾರಿಕೆರೆ ಯುವಕ ಮಂಡಲದ ಮಾಜಿ ಅಧ್ಯಕ್ಷ ಅವಿನಾಶ್ ಬಾರಿಕೆರೆ, ಸ್ಥಳೀಯರಾದ ಅಭಿಜಿತ್ ಕಾಂಚನ್ ಬಾರಿಕೆರೆ ,ಶ್ರೀಕಾಂತ್ ಆಚಾರ್ ಬಾರಿಕೆರೆ, ಸಂದೀಪ್ ತೋಳಾರ್ ಬಾರಿಕೆರೆ ಉಪಸ್ಥಿತರಿದ್ದರು.

 

 

Related Articles

error: Content is protected !!