186
ಕೋಟ : ಇಲ್ಲಿನ ಕೋಟತಟ್ಟು ಬಾರಿಕೆರೆ ನಿವಾಸಿ ರಾಘವೇಂದ್ರ ಪೂಜಾರಿ ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡಿದ್ದು ಈತನ ನೆರವಿಗೆ ಕೂಲಿ ಕಾರ್ಮಿಕ ಮಂಜುನಾಥ್ ಪೂಜಾರಿ ನೆರವಿನಹಸ್ತ ಚಾಚಿದ್ದಾರೆ. ಸ್ವಾತಂತ್ರೋತ್ಸವದ ಅಂಗವಾಗಿ ಈ ಮಹಾಕಾರ್ಯವನ್ನು ಮಂಜುನಾಥ್ ಪೂಜಾರಿ ಮಾಡಿದ್ದಾರೆ.
ಇವರು ದಿನಂಪ್ರತಿ ಕೂಲಿ ಮಾಡಿ ಸಂಪಾದಿಸಿದ ಹಣವನ್ನು ಶೇಖರಿಸಿ ಅನಾರೋಗ್ಯಕ್ಕಿಡಾದವರಿಗೆ,ಸ್ಥಳೀಯ ಸರಕಾರಿ,ಅನುದಾನಿತ ಶಾಲೆಗಳಿಗೆ ನೆರವು ನೀಡುತ್ತಿದ್ದಾರೆ.ಈಗಾಗಲೇ ಸಾಕಷ್ಟು ಸೇವಾಕಾರ್ಯ ಮಾಡಿರುವುದು ಗಮನಾರ್ಹವಾಗಿದೆ.
ಈ ಸಂದರ್ಭದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕ ರಂಜಿತ್ ಬಾರಿಕೆರೆ,ಬಾರಿಕೆರೆ ಯುವಕ ಮಂಡಲದ ಅಭಿಜಿತ್ ಕಾಂಚನ್,ವಿಜಯ್ ಪೂಜಾರಿ,ರತ್ನಾಕರ ಪೂಜಾರಿ ಇದ್ದರು.

