Home » ಲೈಂಗಿಕ ಕಿರುಕುಳ : ಡಾ.ರಾಬರ್ಟ್ ಅಮಾನತು
 

ಲೈಂಗಿಕ ಕಿರುಕುಳ : ಡಾ.ರಾಬರ್ಟ್ ಅಮಾನತು

by Kundapur Xpress
Spread the love

ಕುಂದಾಪುರ : ನಗರದ ಮುಖ್ಯ ರಸ್ತೆಯಲ್ಲಿರುವ  ಸರಕಾರಿ ಆಸ್ಪತ್ರೆಯಲ್ಲಿ ಆಡಳಿತ  ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ರಾಬರ್ಟ್ ರೆಬೆಲ್ಲೊ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್ ಆದೇಶ ಹೊರಡಿಸಿದ್ದು. ವೈದ್ಯಾಧಿಕಾರಿ ಮೇಲೆ ಸಾರ್ವಜನಿಕರು ಆರೋಗ್ಯ ಸಚಿವರಿಗೆ ಸಲ್ಲಿಸಿದ ರೋಗಿಗಳ ಜತೆಗಿನ ದುರ್ನಡತೆಯ ದೂರು ಅರ್ಜಿ, ಸಹ ವೈದ್ಯೆಯಿಂದ ಲೈಂಗಿಕ ಕಿರುಕುಳ ಕುರಿತು ದಾಖಲಾದ ಪ್ರಕರಣ, ಈ ಸಂಬಂಧ ಪೊಲೀಸ್ ನಿರೀಕ್ಷಕರಿಂದ ಬಂದ ಪತ್ರ, ಆಸ್ಪತ್ರೆ ಆವರಣದಲ್ಲಿ ಕೊಳಚೆ ನೀರು, ತ್ಯಾಜ್ಯ ಹರಿದು ರೋಗಬಾಧೆ ಬರಲು ಆಸ್ಪದವಿದ್ದರೂ ನಿರ್ಲಕ್ಷ್ಯ ಮಾಡಿದ ಆರೋಪಗಳಿಗಾಗಿ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಿದ್ದಾರೆ

ಸದ್ಯ ರಾಬರ್ಟ್ ರೆಬೆಲ್ಲೊ ತಲೆಮರೆಸಿಕೊಂಡಿದ್ದು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಭಂಧಿಸದಂತೆ ನಿರೀಕ್ಷಣ ಜಾಮೀನಿಗೆ ಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ

   

Related Articles

error: Content is protected !!