141
ಕೋಟ : ಇಲ್ಲಿನ ಕೋಟತಟ್ಟು ಪಡುಕರೆ ಟೀಮ್ ಭವಾಬ್ಧಿ ವತಿಯಿಂದ 4ನೇ ವರ್ಷದ ಸಂಭ್ರಮದ ಭವಾಬ್ಧಿ-2025 ಇಂದು ಶನಿವಾರ ಕೋಟತಟ್ಟು ಪಡುಕರೆಯಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಸಮಾಜ ಸೇವಕ ಈಶ್ವರ್ ಮಲ್ಪೆ ಇವರಿಗೆ ಕಡಲೂರು ಸನ್ಮಾನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಮಾಜ ಮುಖಿ ಕಾರ್ಯಕ್ರಮ ನಡೆಯಲಿದೆ.
ಸಂಜೆ 6.00 ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಚಿಣ್ಣರ ಚಿಲಿಪಿಲಿ ಹಾಗೂ ಮಂಗಳೂರು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಮಾರಣಕಟ್ಟೆ ಕಾರ್ಣಿಕ ಕ್ಷೇತ್ರದ ಪುಣ್ಯ ಕಥಾನಕ ಬಿಡುವನೇ ಬ್ರಹ್ಮಲಿಂಗ ನೃತ್ಯರೂಪಕ ಹಾಗೂ ಸಂಗೀತ ರಸಮಂಜರಿ ನಡೆಯಲಿದೆ.
ರಾತ್ರಿ 9.30 ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ ಮಂಗಳೂರು ಅಭಿನಯಿಸುವ ಪರಮಾತ್ಮೆ ಪಂಜುರ್ಲಿ ಎಂಬ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

