ಭಗವಂತ ಮಹಾವಿಷ್ಣುವಿನ ‘ದಶಾವತಾರ’ಗಳಲ್ಲಿ ಎಂಟನೆಯ ಅವತಾರಿಯಾಗಿ ದ್ವಾಪರ ಯುಗದ ಮಥುರಾ ನಗರದಲ್ಲಿ ಭಾದ್ರಪದ ಮಾಸದ ಕೃಷ್ಣ ಪಕ್ಷದ ಎಂಟನೆಯ ದಿನದಂದು (ಅಷ್ಟಮಿ) ದೇವಕಿ-ವಸುದೇವರಿಗೆ ರೋಹಿಣಿ ನಕ್ಷತ್ರದಲ್ಲಿ ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಶ್ರೀಕೃಷ್ಣ ಪರಮಾತ್ಮನು ಜನಿಸಿದ ಈ ಪುಣ್ಯ ದಿನದ ಪ್ರಯುಕ್ತ ನಾಡಿನಾದ್ಯಂತ “ಶ್ರೀ ಕೃಷ್ಣ ಜನ್ಮಾಷ್ಟಮಿ” ದಿನವನ್ನು ಸೆಪ್ಟೆಂಬರ್ 7ರಂದು ಆಚರಿಸುತ್ತಾರೆ. ಅದರಲ್ಲೂ ಉಡುಪಿ ಜಿಲ್ಲೆಯ ಕೇಂದ್ರಬಿಂದುವಾದ ಈ ಸಡಗರದ ‘ಶ್ರೀ ಕೃಷ್ಣಜನ್ಮಾಷ್ಟಮಿ’ ದಿನದ ಅಂಗವಾಗಿ ಸೆಪ್ಟೆಂಬರ್ 7ರಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ‘ಮುದ್ದು ಕೃಷ್ಣ ಸ್ಪರ್ಧೆ’ಯನ್ನು ಈ ನಾಡಿನ ಚಿಣ್ಣರಿಗೆ ಹಮ್ಮಿಕೊಂಡಿದ್ದಾರೆ.
ಈ ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯಲಿದ್ದು, 1 ರಿಂದ 3 ವರ್ಷದೊಳಗಿನ ಹಾಗೂ 3 ವರ್ಷ ಮೇಲ್ಪಟ್ಟು 6 ವರ್ಷದೊಳಗಿನ ಮಕ್ಕಳಿಗೆ ಸಂಸ್ಥೆಯ ನಿಯಮಗಳಿಗನುಗುಣವಾಗಿ ಪ್ರಥಮ 7,000/-, ದ್ವಿತೀಯ 5,000/-, ತೃತೀಯ 3,000/-ಗಳೊಂದಿಗೆ ನಡೆಸಲು ತೀರ್ಮಾನಿಸಿದ್ದಾರೆ.. ಭಾಗವಹಿಸುವ ಪ್ರತಿ ಮಗುವಿಗೂ ಸಹ ಪ್ರಶಂಸನಾ ಪತ್ರದೊಂದಿಗೆ ಆಕರ್ಷಕ ಬಹುಮಾನಗಳನ್ನು ನೀಡುವ ಸಂಕಲ್ಪವನ್ನು ಮಾಡಿರುತ್ತಾರೆ. ನಮ್ಮ ಈ ನಾಡಿನ ಸಮಸ್ತ ಜನತೆಯು ಈ ಭಗವಂತನ ಲೀಲೆಗಳನ್ನು ಪ್ರಚುರಪಡಿಸುವ “ಈ ನಮ್ಮ ಎಕ್ಸಲೆಂಟ್ ಆವರಣದ ವೇದಿಕೆಯ ಚಿಣ್ಣರ ಅಂಗಳಕ್ಕೆ ಆಗಮಿಸುವಂತೆ ಆತ್ಮೀಯ ಕರೆಯೋಲೆಯನ್ನು ನೀಡುತ್ತಿದ್ದೇವೆ ಬನ್ನಿ ನಿಮ್ಮ ಮಕ್ಕಳೊಂದಿಗೆ ಈ ಸುಂದರ ಕಾರ್ಯಕ್ರಮವನ್ನು ಚಂದಗಾಣಿಸಿ” ಎನ್ನುವ ಆಶಯಗಳೊಂದಿಗೆ, ಆಡಳಿತಮಂಡಳಿ, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು ಹಾಗೂ ಬೋಧಕ – ಬೋಧಕೇತರ ಸಿಬ್ಬಂಧಿ ವರ್ಗದವರು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು & ಹೈಸ್ಕೂಲ್ ಸುಣ್ಣಾರಿ, ಕುಂದಾಪುರ ತಿಳಿಸಿದ್ದಾರೆ

