122
ಕಾವೂರು : ಮೂಡುಶೆಡ್ಡೆ ಪಂಚಾಯತ್ ಎದುರು ತಾಯಿ ಮಗಳ ಜಗಳದ ಹಾಗೂ ಪರಸ್ಪರ ಹೊಡೆದಾಡಿ ಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದು, ಈ ಬಗ್ಗೆ ಕಾವೂರು ಠಾಣೆಯಲ್ಲಿ ವಿಚಾರಿಸಿದಾಗ ಯಾವುದೇ ದೂರು ದಾಖಲಾಗಲಿಲ್ಲ ಎಂಬ ಮಾಹಿತಿ ತಿಳಿದ ಮಹಿಳಾ ಸಂರಕ್ಷಣಾ ವೇದಿಕೆ ಇಂದು ಹಿರಿಯ ನಾಗರೀಕರಾಗಿದ್ದ ನಿರ್ಮಲ ಅವರಿಗೆ ನ್ಯಾಯ ಕೊಡಿಸುವ ಉದ್ದೇಶ ದಿಂದ ಅವರ ಮಗಳಾದ ನೇತ್ರಾವತಿ ಅವರ ಮೇಲೆ ಠಾಣೆಯಲ್ಲಿ ದೂರು ನೀಡಲಾಯಿತು.
ಆರೋಪಿ ನೇತ್ರಾವತಿ ಅವರಿಗೆ ಸರಿಯಾದ ಶಿಕ್ಷೆ ಆಗಬೇಕು ಮತ್ತು ಹಿರಿಯ ವೃದ್ದೆ ಆಗಿರುವ ನಿರ್ಮಲ ಅವರ ಯೋಗ, ಕ್ಷೇಮ ತಿಳಿಸಬೇಕೆಂದು ವಿನಂತಿಸಲಾಯಿತು.ಈ ಸಂದರ್ಭದಲ್ಲಿ ಸಾಮಾಜಿಕ ಚಿಂತಕಿ ಆಗಿರುವ ರಮಿತಾ ಸೂರ್ಯವಂಶಿ ಮತ್ತು ಹಿಂದೂ ಜಾಗರಣ ಜಿಲ್ಲಾ ಕಾರ್ಯಕಾರಿ ಸದಸ್ಯರಾಗಿರುವ ದೀಕ್ಷಿತ್ ಅವರು ಉಪಸ್ಥಿತರಿದ್ದರು.

