Home » ಸಾವಿನಲ್ಲೂ ಒಂದಾದ ದಂಪತಿ
 

ಸಾವಿನಲ್ಲೂ ಒಂದಾದ ದಂಪತಿ

by Kundapur Xpress
Spread the love

ಉಡುಪಿ : ಸೋಮವಾರ ಬೆಳಗ್ಗೆ 5.50 ರ ಸುಮಾರಿಗೆ ನಗರದ ಅಂಬಲಪಾಡಿಯಲ್ಲಿನ ಗಾಂಧಿ ನಗರದಲ್ಲಿದ್ದ ಬಂಗಲೆಯಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಸಾವಿನ ಸಂಖ್ಯೆ ಎರಡಕ್ಕೇರಿದೆ. ಸೋಮವಾರ ರಮಾನಂದ ಶೆಟ್ಟಿ ಮೃತಪಟ್ಟಿದ್ದರೆ, ಮಂಗಳವಾರ ಅವರ ಪತ್ನಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಅಶ್ವಿನಿ ಬಹು ಅಂಗಾಂಗ ವೈಫಲ್ಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಉಡುಪಿ ಅಗ್ನಿಶಾಮಕದಳ, ನಗರ ಠಾಣಾ ಪೊಲೀಸರು ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಂದಿಸಿ, ಗಂಭೀರ ಗಾಯಗೊಂಡಿದ್ದ ಪತಿ, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರು ಮಕ್ಕಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದರು.

ಕಾರ್ಬನ್ ಮಾನಾಕ್ರೈಡ್ ಸೇವನೆ ಶಂಕೆ

ಬಂಗಲೆಯಲ್ಲಿ ಉಂಟಾಗಿದೆ ಎನ್ನಲಾದ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಹೊಗೆ ತುಂಬಿಕೊಂಡಿತ್ತು. ಇದನ್ನು ಕೋಣೆಯಲ್ಲಿದ್ದ ಎಸಿಯೂ ಎಳೆದುಕೊಂಡಿದ್ದು, ಅಲ್ಲಿ ಕಾರ್ಬನ್ ಮೋನಾಕ್ಸೈಡ್‌  ಉತ್ಪತ್ತಿಯಾಗಿರಬಹುದು. ಇದರ ಸೇವನೆಯಿಂದ ದಂಪತಿಯ ಜೀವಕ್ಕೆ ಕುತ್ತು ಬಂದಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಸ್ಪಷ್ಟತೆ ದೊರಕಲಿದೆ.

   

Related Articles

error: Content is protected !!