179
ಕುಂದಾಪುರ: ಉಪ್ಪುಂದ ಗ್ರಾಮದ ಮಡಿಕಲ್ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರ ಕಡಲಿಗೆ ಬಿದ್ದು ಅಸುನೀಗಿದ್ದಾರೆ ಶನಿವಾರ ಸಂಜೆ ನಾಗರಾಜ್ ಇತರರೊಂದಿಗೆ ದೋಣಿಯಲ್ಲಿ ತೆರಳಿದ್ದು ಮಡಿಕಲ್ ಜಟ್ಟಿಯಿಂದ 12 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಕಡಲಿಗೆ ಬಿದ್ದಿದ್ದು ಅವರನ್ನು ಮೇಲೆತ್ತಿ ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿ ಅಲ್ಲಿನ ವೈದ್ಯರು ಸಲಹೆಯಂತೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲಾಯಿತು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ .ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

