ಕಾಪು : ದಕ್ಷಿಣ ಕನ್ನಡ ಮೋಗವೀರ ಹಿತಸಾಧನಾ ವೇದಿಕೆ (ರಿ.) ಉಚ್ಚಿಲ, ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆ, ಉಚ್ಚಿಲ ಇವರ ಪ್ರಯೋಜಕತ್ವದಲ್ಲಿ ಶ್ರೀನಿವಾಸ ಆಸ್ಪತ್ರೆ ಮುಕ್ಕ, ಸುರತ್ಕಲ್, ಮಂಗಳೂರು ಇವರ ಸಹಯೋಗದಲ್ಲಿ ದಿನಾಂಕ 25-01-2025 ರಂದು ಉಚ್ಚಿಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ “ಉಚಿತ ವೈದ್ಯಕೀಯ ತಪಾಸಣಾ ಶಿಬಿರ”ವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದ ಗಂಗಾಧರ್, ದಕ್ಷಿಣ ಕನ್ನಡ ಮೋಗವೀರ ಹಿತಸಾಧನಾ ವೇದಿಕೆ ರಿ. ಉಚ್ಚಿಲ ಅಧ್ಯಕ್ಷರಾದ ಸರ್ವೋತ್ತಮ, ಉಪಾಧ್ಯಕ್ಷರಾದ ಸತೀಶ್ ಸಾಲಿಯಾನ್, ಕಾಪು ಪುರಸಭೆಯ ಸದಸ್ಯರಾದ ಕಿರಣ್ ಆಳ್ವ, ಶ್ರೀನಿವಾಸ್ ಆಸ್ಪತ್ರೆಯ ಡಾ. ಶಶಿರಾಜ್, ಅಂಚೆ ಅಧಿಕಾರಿಗಳಾದ ರಮೇಶ್, ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ನವ್ಯ ಉಪಸ್ಥಿತರಿದ್ದರು.