Home » ಫ್ರೆಂಡ್ಸ್ ಸರ್ಕಲ್ ವತಿಯಿಂದ ಪ್ರತಿಭಾ ಪುರಸ್ಕಾರ
 

ಫ್ರೆಂಡ್ಸ್ ಸರ್ಕಲ್ ವತಿಯಿಂದ ಪ್ರತಿಭಾ ಪುರಸ್ಕಾರ

by Kundapur Xpress
Spread the love

ಕುಂದಾಪುರ : ಕರ್ನಾಟಕ ಸಂಘ ರತ್ನ ಹಾಗೂ ಭಾರತ ಸಂಘ ಸಿರಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಫ್ರೆಂಡ್ಸ್ ಸರ್ಕಲ್ ರಿ.ಮೀನು ಮಾರ್ಕೆಟ್ ರಸ್ತೆ ಕುಂದಾಪುರ ಇದರ 35ನೇ ವರ್ಷದ ಪುರಸಭಾ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕುಂದಾಪುರದ ಬಿ ಆರ್ ರಾಯರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನೆರವೇರಿತು.

ಸಂಸ್ಥೆಯ ಅಧ್ಯಕ್ಷರಾದ ಶ್ರೀ ನಾಗರಾಜ್ ಖಾರ್ವಿ ಸಭಾ ಅಧ್ಯಕ್ಷತೆ ವಹಿಸಿದ್ದರು .ಹಲವಾರು ಉತ್ತಮವಾದ ಕಾರ್ಯಕ್ರಮಗಳನ್ನು ಪರಿಸರದಲ್ಲಿ ನಡೆಸುತ್ತಾ ಬಂದಿರುವ ಫ್ರೆಂಡ್ ಸರ್ಕಲ್ ಸಂಸ್ಥೆಯು ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸುತ್ತಿದ್ದು ಉತ್ತಮ ನಾಯಕತ್ವದೊಂದಿಗೆ ಸಮಾನ ಮನಸ್ಕ ತಂಡವಾಗಿ ಪರಿಸರದಲ್ಲಿ ಜನಾನುರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯ ಅತಿಥಿಯಾದ ಕುಂದಾಪುರ ಪುರಸಭಾ ಸದಸ್ಯೆ ಶ್ರೀಮತಿ ದೇವಕಿ ಪಿ ಸಣ್ಣಯ್ಯ ನುಡಿದರು 

ಇನ್ನೋರ್ವ ಮುಖ್ಯ ಅತಿಥಿಯಾದ ಮಾಜಿ ಪುರಸಭಾ ಸದಸ್ಯ ಶ್ರೀ ಸತೀಶ್ ಶೆಟ್ಟಿಯವರು ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಅಯೋಜಿಸುತ್ತಾ ಬಂದಿದ್ದು, ಕಳೆದ 34 ವರ್ಷಗಳಿಂದ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಮಾಡುತ್ತಾ ಮಕ್ಕಳಿಗೆ ಉತ್ತೇಜನ ನೀಡುತ್ತಾ ಬಂದಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಶ್ರೀ ರವಿನಾಥ್ ಶೆಣೈ. ಕುಂದಾಪುರ ಪುರಸಭಾ ಸದಸ್ಯೆ ಶ್ರೀಮತಿ ದೇವಕಿ ಪಿ ಸಣ್ಣಯ್ಯ, ಮಾಜಿ ಪುರಸಭಾ ಸದಸ್ಯ ಶ್ರೀ ಸತೀಶ್ ಶೆಟ್ಟಿ, ಬಿ ಆರ್ ರಾಯರ ಹಿಂದೂ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ನಿಂಗಪ್ಪ ಎಂ. ಸಂಸ್ಥೆಯ ಕಾರ್ಯದರ್ಶಿ ಶ್ರೀ ಗಣೇಶ್ ನಾಯ್ಕ್ ಉಪಸ್ಥಿತರಿದ್ದರು . ಸಂಸ್ಥೆಯ ಸದಸ್ಯರಾದ ಮಂಜುನಾಥ ಪೂಜಾರಿ, ಮನೋಹರ್ ಪುತ್ರನ್, ಗುರುಪ್ರಸಾದ್ ಖಾರ್ವಿ, ಧನಪಾಲ ಪುತ್ರನ್, ಶರತ್ ಎಸ್ ಖಾರ್ವಿ,ಗಣೇಶ ಆಚಾರ್,ಗಣಪತಿ ಖಾರ್ವಿ ಉದಯ ಮಾಣಿಮನೆ, ಸುರೇಶ್ ಪುತ್ರನ್, ಗಣೇಶ ಸಾಲಿಯಾನ್ ಹಾಗೂ ವಿದ್ಯಾರ್ಥಿಗಳು, ಪೋಷಕರು ಶಿಕ್ಷಕರು ಭಾಗವಹಿಸಿದ್ದರು . ಚೇತನ್ ದೇವಾಡಿಗ ಸ್ವಾಗತಿಸಿದರು,ಶೇಖರ್ ಜಿ ಖಾರ್ವಿ ನಿರೂಪಣೆ ಮಾಡಿ ವಂದಿಸಿದರು.

 

Related Articles

error: Content is protected !!