Home » ಹಲಸು ಮತ್ತು ಮಾವು ಮೇಳ : 2ನೇ ದಿನದ ಕಾರ್ಯಕ್ರಮ
 

ಹಲಸು ಮತ್ತು ಮಾವು ಮೇಳ : 2ನೇ ದಿನದ ಕಾರ್ಯಕ್ರಮ

ಸಮಗ್ರ ಕೃಷಿ ಪದ್ದತಿಗೆ ಆದ್ಯತೆ ನೀಡಿ -ಚಂದ್ರಶೇಖರ್ ನಾಯ್ಕ್

by Kundapur Xpress
Spread the love

ಕೋಟ : ಕೃಷಿ ಪದ್ದತಿಯಲ್ಲಿ ಕಾಲಕ್ಕೆ ಅನುಗುಣವಾಗಿ ಬದಲಾವಣೆಗಳು ಅವಶ್ಯ ಈ ನಿಟ್ಟಿನಲ್ಲಿ ಯಾಂತ್ರಿಕತೆಯ ಮೂಲಕ ಸಮಗ್ರ ಕೃಷಿ ಪದ್ದತಿಯನ್ನು ರೂಪಿಸಿಕೊಳ್ಳಿ ಎಂದು ಉಡುಪಿ ಜಿಲ್ಲಾ ಉಪ ಕೃಷಿ ನಿರ್ದೇಶಕ ಚಂದ್ರಶೇಖರ್ ನಾಯ್ಕ್ ಹೇಳಿದರು.
 ಕೋಟದ ಗಾಂಧಿ ಮೈದಾನದಲ್ಲಿ ಸಂಸ್ಕೃತಿ ಸಂಭ್ರಮ ಟ್ರಸ್ಟ್ ಕೋಟ ಕುಂದಾಪುರ, ವಿಧಾತ್ರಿ ರೈತ ಉತ್ಪಾದಕ ಸಂಸ್ಥೆ ಕೋಟ,ಗೀತಾನಂದ ಫೌಂಡೇಶನ್ ಮಣೂರು,ಕೋಟ ಸಹಕಾರಿ ವ್ಯವಸಾಯಕ ಸಂಘ ಇವರುಗಳ ಸಹಭಾಗಿತ್ವದಡಿ ಹಲಸು ಮಾವು ಹಾಗೂ ಕೃಷಿ ಮೇಳ ೨೦೨೫ ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮದಲ್ಲಿ ವಿಧಾತ್ರಿ ಸಂಸ್ಥೆಯ ಪ್ಲಾಟ್ ಫಾಮ್೯ ಬಿಡುಗಡೆ, ಟ್ರೇಡ್ ಮಾಕ್೯ ಅನಾವರಣ ಮತ್ತು ರೈತ ಏಕತಾ ಕೇಂದ್ರ ಉದ್ಘಾಟನೆಗೊಳಿಸಿ ಮಾತನಾಡಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಜತೆಗೆ ಉತ್ಪಾದನಾ ವೆಚ್ಚ ಕಡಿಮೆಗೊಳಿಸುವ ಯೋಜನೆ ರೂಪಿಸಬೇಕು ಈ ಮೂಲಕ ಕೃಷಿ ಕೃಷಿ ಕ್ಷೇತ್ರದಲ್ಲಿ ಆಮೂಲಾಗ್ರ ಸುಧಾರಣೆ ತರುವ ಅವಶ್ಯಕತೆ ಸಭೆಯಲ್ಲಿ ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾತ್ರಿ ಸಂಸ್ಥೆಗೆ ಸಂಬಂಧಿಸಿದ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್,ಇ ಕಾಮಸ್೯ ಇವುಗಳನ್ನು ವೇದಿಕೆಯಲ್ಲಿದ್ದ ಗಣ್ಯರು ಅನಾವರಣಗೊಳಿಸಿದರು.
ಏಕತಾ ಕೇಂದ್ರದ ಕೀ ಅನ್ನು ರಾಜ್ಯದ ಕೃಷಿ ಸಮಾಜದ ಪ್ರತಿನಿಧಿ ಪ್ರದೀಪ್ ಹೆಬ್ಬಾರ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರ ಸಾಧಕರಾದ ಬಾಳೆಕುದ್ರುವಿನ ಡೆನಿಸ್ ಕಾರ್ಡೋಜಾ,ಕೇಂಜೂರು ನವೀನ್ ಪೂಜಾರಿ,ಕೋಟದ ಒಳಮಾಡು ಸೋಮ ಮರಕಾಲ,ಕಾವಡಿ ಯೇಸು ಶೆಟ್ಟಿ, ಪಾರಂಪಳ್ಳಿ ರಮೇಶ್ ಹೇರ್ಳೆ,ಕೋಟತಟ್ಟು ಪಡುಕರೆ ಶಿವಮೂರ್ತಿ ಉಪಾಧ್ಯಾ,ಬನ್ನಾಡಿಯ ಚಂದ್ರಕಲಾ ಇವರುಗಳನ್ನು ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಿಧಾತ್ರಿ ಸಂಸ್ಥೆಯ ಎಫ್ ಪಿ ಒ ಕೋಟ ಅಧ್ಯಕ್ಷ ಶ್ರಾವಿತ್ ಎನ್ ಶೆಟ್ಟಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ ಸಹ ಸಂಶೋಧನಾ ನಿರ್ದೇಶಕ ಡಾ.ಬಿ ಧನಂಜಯ್ ,ವಿಧಾತ್ರಿ ಸಂಸ್ಥೆಯ ನಿರ್ದೇಶಕರಾದ ರಘು ಮಧ್ಯಸ್ಥ ಪಾರಂಪಳ್ಳಿ,ಜ್ಯೋತಿ,ಭೋಜ ಕೂಸ ಪೂಜಾರಿ,ಸಂಸ್ಕöÈತಿ ಸಂಭ್ರದ ಟ್ರಸ್ಟ್ ನ ಸಂಚಾಲಕ ಸತೀಶ್ ಕುಮಾರ್,ಸದಸ್ಯ ಇಬ್ರಾಹಿಂ ಬ್ಯಾರಿ, ಉಪಸ್ಥಿತರಿದ್ದರು. ವಿಧಾತ್ರಿ ಸಂಸ್ಥೆಯ ನಿರ್ದೇಶಕ ಭಾಸ್ಕರ್ ಶೆಟ್ಟಿ ಮಣೂರು ಸ್ವಾಗತಿಸಿದರು. ವಿಧಾತ್ರಿ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ನವನೀತ ಶೆಟ್ಟಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಸುಜಾತ ಬಾಯರಿ ನಿರೂಪಿಸಿ ವಂದಿಸಿದರು.

 

Related Articles

error: Content is protected !!