ಕುಂದಾಪುರ : ನಾಳೆ ಭಾದ್ರಪದ ಶುಕ್ಲಪಕ್ಷದ ಚೌತಿ ಮನೆ ಮನೆಗಳಲ್ಲಿ ನಗರ ನಗರಗಳಲ್ಲಿ ಸಾರ್ವಜನಿಕವಾಗಿ ಸಂಭ್ರಮದಿಂದ ಆಚರಿಸಲ್ಪಡುವ ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು ಎಲ್ಲಡೇ ಹಬ್ಬದ ಆಚರಣೆಗೆ ಭರದ ಸಿದ್ದತೆ ನಡೆದಿದೆ
ಗಣೇಶನ ಹಬ್ಬ ಹತ್ತಿರವಾದ ಬೆನ್ನಿಗೆ ಕುಂದಾಪುರ ತಾಲೋಕಿನ ಹಲವೆಡೆ ಹೂ ಹಣ್ಣು ಹಂಪಲು ಹಾಗೂ ಕಬ್ಬುಗಳಿಗೆ ದರ ಎರಿಕೆಯ ಬಿಸಿ ಮುಟ್ಟಿದೆ ಬಾಳೆ ಹಣ್ಣಿಗೆ ವಿಪರೀತ ಬೇಡಿಕೆ ಬಂದಿದ್ದು ಬೇಡಿಕೆಗೆ ತಕ್ಕ ಪೂರೈಕೆ ಇಲ್ಲದ ಕಾರಣ ಸಹಜವಾಗಿಯೇ ಬಾಳೆ ಹಣ್ಣಿಗೆ ಬೆಲೆ ಏರಿಕೆಯಾಗಿದೆ
ನಾಳೆಯ ಸಂಭ್ರಮದಲ್ಲಿ ಗಣೇಶನ ವಿವಿಧ ರೀತಿಯ ಅಳತೆಯ ಮೃಣ್ಮಯಿ ಮೂರ್ತಿ ಕಲಾವಿದರ ಕೈಚಳಕದಲ್ಲಿ ಕಣ್ಮನ ಸೆಳೆಯುತ್ತಿದ್ದು ಅನೇಕರು ಮನೆ ಮನೆಗಳಲ್ಲಿ ಪೂಜಿಸುವುದಕ್ಕಾಗಿ ಈಗಾಗಲೇ ಮೂರ್ತಿಗಳು ಸಿದ್ದಗೊಂಡಿದೆ
ಬೇರೆ ಬೇರೆ ಉದ್ಯೋಗದ ಸ್ಥಳಗಳಿಂದ ಹಬ್ಬಕ್ಕಾಗಿ ಊರಿಗೆ ಬರಲು ಹಲವರು ಸಿದ್ಧತೆ ನಡೆಸುತ್ತಿದ್ದರೆ ಹಾಗೆ ಬಂದವರಿಗೂ ಆತಿಥ್ಯವಾಗಬೇಕೆಂದು, ಹಬ್ಬ ಇನ್ನಷ್ಟು ಕಳೆಗಟ್ಟಬೇಕೆಂದು ಬೆಲೆ ಎರಿಕೆಯ ಮದ್ಯದಲ್ಲೂ ಕೊಟ್ಟೆ ಕಡುಬು ಪಂಪತ್ಲಿ ಹಲಸಿನ ಕೊಟ್ಟೆಗಳ ತಯಾರಿಕೆಯಲ್ಲಿ ಮನೆ ಮಂದಿ ಮಗ್ನರಾಗಿದ್ದಾರೆ
ಕುಂದಾಪುರದ ಹಲವು ಸಂಘ ಸಂಸ್ಥೆ ದೇವಸ್ಥಾನ ಅಲ್ಲದೇ ಆನೆಗುಡ್ಡೆಯ ಶ್ರೀ ವಿನಾಯಕ ದೇವಸ್ಥಾನ ಗುಡ್ಡಟ್ಟು ವಿನಾಯಕ ದೇವಸ್ಥಾನ ಹಾಗೂ ಹಟ್ಟಿಯಂಗಡಿಯಲ್ಲಿ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಲಿದ್ದು ಗಣೇಶ ವಿಸರ್ಜನೆಯ ಭವ್ಯ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯತ್ತಿದ್ದಾರೆ

