Home » ಇಂದು ಶ್ರೀ ಕೃಷ್ಣಮಠಕ್ಕೆ ಗೌರಂಗದಾಸ್ ಭೇಟಿ
 

ಇಂದು ಶ್ರೀ ಕೃಷ್ಣಮಠಕ್ಕೆ ಗೌರಂಗದಾಸ್ ಭೇಟಿ

by Kundapur Xpress
Spread the love

ಉಡುಪಿ :  ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣಮಠದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯುತ್ತಿರುವ 48 ದಿನಗಳ ಕಾಲದ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಪೂಜ್ಯ ಪರ್ಯಾಯ ಶ್ರೀಪಾದರ ಆಮಂತ್ರಣದಂತೆ ಇಂದು ಇಸ್ಕಾನ್ ಸಂಸ್ಥೆಯ ಅಂತಾರಾಷ್ಟ್ರೀಯ ಸಂಯೋಜಕರಾದ ಜನಪ್ರಿಯ ವಾಗ್ಮಿಗಳಾದ ಶ್ರೀ ಗೌರಂಗದಾಸ್ ರವರು  ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ.

ಶ್ರೀ ಕೃಷ್ಣ ದರ್ಶನ ಪಡೆದ ಬಳಿಕ ಅವರು ಸಾಯಂಕಾಲ 4.00 ಗಂಟೆಗೆ ರಾಜಾಂಗಣದಲ್ಲಿ ಪೂಜ್ಯ ಪರ್ಯಾಯ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ (N.M.P.T), ಮಂಗಳೂರಿನ ಚೇರ್ಮನ್ ಡಾ. ವೆಂಕಟ ರಮಣ ಅಕ್ಕರಾಜು ಮತ್ತು ಡಾ. ಮುದ್ದುಮೋಹನ್ , ನಿವೃತ್ತ IAS. ಅಧಿಕಾರಿಗಳು ಭಾಗವಹಿಸಲಿದ್ದಾರೆ.

 ಶ್ರೀ ಕೃಷ್ಣ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ಮಠದ ಪ್ರಕಟನೆ ತಿಳಿಸಿದೆ.

 

Related Articles

error: Content is protected !!