Home » ಹಲಸು ಮಾವು ಮೇಳಕ್ಕೆ ಚಾಲನೆ
 

ಹಲಸು ಮಾವು ಮೇಳಕ್ಕೆ ಚಾಲನೆ

by Kundapur Xpress
Spread the love

ಉಡುಪಿ : ಉಡುಪಿ ಶ್ರೀ ಕೃಷ್ಣ ಮಠದ ಗೀತಾ ಮಂದಿರದಲ್ಲಿ ಪೂಜ್ಯ ಪರ್ಯಾಯ ಶ್ರೀಪಾದರಾದ ಶ್ರೀ; ಸುಗುಣೇಂದ್ರ ತೀರ್ಥ ಶ್ರೀಪಾದರು ಹಲಸು ಮಾವು ಮೇಳಕ್ಕೆ ಚಾಲನೆ ನೀಡಿದರು

ಈ ಸಂದರ್ಭದಲ್ಲಿ ಪೂಜ್ಯ ಪರ್ಯಾಯ ಶ್ರೀಪಾದರು ಮಾತನಾಡಿ ಭಗವದ್ ಗೀತೆಯಲ್ಲಿ *ಪತ್ರಂ ಪುಷ್ಪಂ ಫಲಂ ತೋಯಂ* ಎಂದು ಹೇಳಿ ಯಾವುದಾದರೂ ಫಲವನ್ನು ನೀಡಿದರೂ ನಾನು ಸಂತೋಷ ಗೊಳ್ಳುತ್ತೇನೆ ಎಂದು ಭಗವಾನ್ ಶ್ರೀಕೃಷ್ಣ ತಿಳಿಸಿದಂತೆ,ಕರಾವಳಿಯ ಭಾಗದಲ್ಲಿ ಹೇರಳವಾಗಿ ದೊರೆಯುವ ಹಲಸು ಮಾವುಗಳ ವೈವಿಧ್ಯವನ್ನು ತಜ್ಜನ್ಯ ಖಾದ್ಯಗಳನ್ನು ಈ ಮೇಳದಲ್ಲಿ ಪ್ರದರ್ಶಿಸುತ್ತಿದ್ದಾರೆ.

ಜನರು ಶ್ರೀಕೃಷ್ಣನ್ನು ಸ್ಮರಿಸಿ ಈ ಮೇಳದ ಪ್ರಯೋಜನ ವನ್ನು ಗೀತಾ ಮಂದಿರದಲ್ಲಿ ಪಡೆದುಕೊಳ್ಕಬಹುದು, ತನ್ಮೂಲಕ ಕರ್ಮ ಫಲದ ಸಮರ್ಪಣೆಯಾಗುವುದು ಎಂದು ಹರಸಿ ಬೆಳೆಗಾರರನ್ನು ಪ್ರೋತ್ಸಾಹಿಸಿ ಎಂದು ಕರೆಯಿತ್ತರು.

ಮುಖ್ಯ ಅತಿಥಿಗಳಾಗಿ ಭವಾನಿ ಗ್ರೂಪ್ಸ್ ನ ಮಾಲಕ ಶ್ರೀ ಕುಸುಮೋದರ ಶೆಟ್ಟಿಯವರು ಆಗಮಿಸಿದ್ದರು. ಭಾರತ್ ಮೇಳದ ಸಂಚಾಲಕ ಶ್ರೀ ರಮಣಾಚಾರ್ಯ ಸ್ವಾಗತಿಸಿ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ದಿವಾನರಾದ ನಾಗರಾಜಾಚಾರ್ಯ , ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ,ರತೀಶ್ ತಂತ್ರಿ,ಅನಂತ ಕೃಷ್ಣ,ರಮೇಶ್ ಭಟ್,ಅನಂತಕೃಷ್ಣ,ಪ್ರಮೋದ್ ಸಾಗರ್ ಮುಂತಾದವರು ಉಪಸ್ಥಿತರಿದ್ದರು.

ಈ ಹಲಸು ಮೇಳವು ಗೀತಮಂದಿರದಲ್ಲಿ ಗೀತಾಮಂದಿರದಲ್ಲಿ ಬೆಳಿಗ್ಗೆ 8.00 ರಿಂದ ಸಂಜೆ 8.00 ರ ವರೆಗೆ ಸಾರ್ವಜನಿಕರಿಗಾಗಿ ತೆರೆದಿರುವುದು ಎಂದು ಸಂಚಾಲಕ ರಮಣಾಚಾರ್ಯ ತಿಳಿಸಿರುತ್ತಾರೆ.

 

Related Articles

error: Content is protected !!