ಕೋಟ : ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ದೀಪೋತ್ಸವz ಭವ್ಯ ದರ್ಶನದ ಸಂದರ್ಭದಲ್ಲಿ ಶ್ರೀ ಗುರು ಧಾಮದ ಕಾಮಗಾರಿಗೆಂದು ಗಮನಾರ್ಹ ಮೊತ್ತದ ದೇಣಿಗೆಯನ್ನು ಪಿ.ಎನ್.ವಸಂತ ಉಪಾಧ್ಯ ಪತ್ನಿ ಸುಧಾರೊಂದಿಗೆ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಆಡಳಿತ ಮಂಡಳಿಗೆ ನೀಡಿದರು. ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಮತ್ತು ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ತುಂಗ, ಕೋಶಾಧಿಕಾರಿ ಪರಶುರಾಮ ಭಟ್ಟ ಮತ್ತು ಬೆಂಗಳೂರಿನ ಎ.ವಿ.ಶ್ರೀಧರ ಕಾರಂತರು ವಸಂತ ಉಪಾಧ್ಯ ದಂಪತಿಗೆ ಪ್ರಸಾದವನ್ನು ನೀಡಿ ಶುಭವನ್ನು ಹಾರೈಸಿದರು. ಈ ಸಂದರ್ಭದಲ್ಲಿ ಕೂಟ ಮಹಾ ಜಗತ್ತಿನ ಕೇಂದ್ರ ಕಾರ್ಯದರ್ಶಿ ಸುರೇಶ ತುಂಗ, ಕಾರ್ಕಡ ತಾರಾನಾಥ ಹೊಳ್ಳ, ಗ್ರಾಮ ಮೊಕ್ತೇಸರ ಚಿದಾನಂದ ತುಂಗ ಮತ್ತಿತರರು ಉಪಸ್ಥಿತರಿದ್ದರು.