Home » ಗುರುಕುಲ ಪಬ್ಲಿಕ್ ಶಾಲೆಯಲ್ಲಿ ರೋಬೋಟಿಕ್ಸ್ ಮತ್ತು ಕೋಡಿಂಗ್ ತರಗತಿಗಳ ಉದ್ಘಾಟನೆ
 

ಗುರುಕುಲ ಪಬ್ಲಿಕ್ ಶಾಲೆಯಲ್ಲಿ ರೋಬೋಟಿಕ್ಸ್ ಮತ್ತು ಕೋಡಿಂಗ್ ತರಗತಿಗಳ ಉದ್ಘಾಟನೆ

by Kundapur Xpress
Spread the love

ಕೋಟೇಶ್ವರ : ಗುರುಕುಲ ಪಬ್ಲಿಕ್ ಶಾಲೆಯಲ್ಲಿ ರೋಬೋಟಿಕ್ಸ್ ಮತ್ತು ಕೋಡಿಂಗ್ ತರಗತಿಗಳ ಉದ್ಘಾಟನೆಯು ನಡೆಯಿತು. ಬಾಂಡ್ಯ ಎಜ್ಯುಕೇಶನ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಲ್ಯಾಬ್‌ನ ಉದ್ಘಾಟನೆ ನೆರವೇರಿಸಿ, ಶುಭ ಕೋರಿದರು.

ಟಿಂಕರ್‌ಸ್ಪೇಸ್, ಉಡುಪಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಪ್ರಣಮ್ ಆಚಾರ್ಯ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ಟಿಂಕರ್‌ಸ್ಪೇಸ್ ನ ಅತಿಥಿಗಳನ್ನು ಪ್ರೀತಿಯಿಂದ ಬರಮಾಡಿಕೊಳ್ಳುವ ಮೂಲಕ, ನಮ್ಮ ಸಂಸ್ಥೆಯು ಈ ಶೈಕ್ಷಣಿಕ ವರ್ಷದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶೇಷವಾದ ಹೊಸ ಹೆಜ್ಜೆಯನ್ನಿಡುವುದರ ಜೊತೆಗೆ ಈ ಕಾಲದಲ್ಲಿ ಕೃತಕಬುದ್ಧಿಮತ್ತೆ (AI) ಯ ಮಹತ್ವ ಏನು ಮತ್ತು ಭವಿಷ್ಯದಲ್ಲಿ ಅದರಿಂದ ವಿದ್ಯಾರ್ಥಿಗಳಿಗೆ ಸಿಗುವ ಪ್ರಯೋಜನದ ಕುರಿತು ವಿವರಿಸಿದರು.

ಕಾರ್ಯಕ್ರಮವನ್ನು ಸಹಶಿಕ್ಷಕಿ ವರದಾ ಸ್ವಾಗತಿಸಿ, ವಂದಿಸಿದರು.

 

Related Articles

error: Content is protected !!