220
ಉಡುಪಿ: ವೀಡಿಯೊ ಪ್ರಕರಣದ ತನಿಖೆಗಾಮಿಸಿದ ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಖುಷ್ಬೂ ಸುಂದರ್ ಹೇಳಿಕೆಗೆ ಬಿಜೆಪಿಯವರಿಂದಲೇ ವಿರೋಧ ವ್ಯಕ್ತವಾಗಿದೆ. ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳಿ, ಖುಷ್ಬೂ ಅವರಿಗೆ ಹಿಂದೂ ಸಂಸ್ಕೃತಿಯ ಅರಿವಿಲ್ಲ. ಅವರು ಬಂದು ತೀರ್ಪು ಕೊಡುವುದು ಹೇಗೆ? ಅವರು ಯಾರನ್ನು ವಿಚಾರಣೆ ಮಾಡಿದ್ದಾರೋ ನಮಗೆ ಗೊತ್ತಿಲ್ಲ. ಹಿಡನ್ ಕ್ಯಾಮೆರಾ ಇರಲಿಲ್ಲ ಎಂದು ಹೇಳಿದ್ದಾರೆ. ಇದು ಮಾತ್ರ ಸತ್ಯ. ಹಿಡನ್ ಕ್ಯಾಮೆರಾ ಇಲ್ಲ ಎಂದು ನಾವೇ ಹೇಳಿದ್ದೇವೆ. ಆದರೆ, ಮೊಬೈಲ್ ಚಿತ್ರೀಕರಣ ಆಗಿರುವುದು ಎಲ್ಲಿಗೆಲ್ಲ ಹೋಗಿದೆ ಎಂಬ ಬಗ್ಗೆ ತನಿಖೆಯಾಗಲಿ ಎಂದವರು ಹೇಳಿದರು

