ಭಟ್ಕಳ : ಇತ್ತಿಚಿಗೆ ಧ್ವಜ ತೆರವು ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದ ಸ್ಥಳದಲ್ಲೇ ಹನುಮ ಧ್ವಜವನ್ನು ಮತ್ತೇ ಹಾರಿಸಿದ ಘಟನೆ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆಯವರ ಸಮ್ಮುಖದಲ್ಲಿ ನಡೆದಿದೆ. ಆ ಮೂಲಕ ಸಂಸದರು ಮತ್ತೆ ಧ್ವಜ ದಂಗಲ್ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ. ಅನಧಿಕೃತವಾಗಿ ಧ್ವಜ ಕಟ್ಟೆ ನಿರ್ಮಾಣ ಮಾಡಲಾಗಿದೆ ಎಂದು ತೆಂಗಿನಗುಂಡಿ ಗ್ರಾಮದಲ್ಲಿ ಕಟ್ಟಲಾಗಿದ್ದ ಧ್ವಜ ಕಟ್ಟೆ ಹಾಗೂ ಸಾವರ್ಕರ್ ಬೊರ್ಡ್ ಅನ್ನು ತೆರವು ಮಾಡಲಾಗಿತ್ತು. ಇದಕ್ಕೆ ಸ್ಥಳಿಯ ಹಿಂದೂ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದ್ದರು.
ನಿನೆ ಕಾರ್ಯಕರ್ತರ ಸಭೆಗೆಂದು ಅನಂತ್ ಕುಮಾರ್ ಹೆಗಡೆ ಅವರು ತೆಂಗಿನಗುಂಡಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ವಿಷಯ ಪ್ರಸ್ತಾಪವಾದಾಗ ನಾನಿದ್ದೇನೆ ನಡಿರಿ ಎಂದು ಹೇಳಿ ಅನಂತ್ ಕುಮಾರ್ ಹೆಗಡೆ ಅವರು ತೆರವು ಮಾಡಲಾಗಿದ್ದ ಸ್ಥಳದಲ್ಲೇ ಹನುಮ ಧ್ವಜ ಹಾರಿಸಿದರು ಅಲ್ಲದೆ ಸಾವರ್ಕರ್ ಬೋರ್ಡ್ ಕೂಡ ಹಾಕಿದರು