ಆಂಜನೇಯ ಕೇಸರಿ ಮತ್ತು ಅಂಜನಾ ದಂಪತಿಗಳ ಪುತ್ರ .ಕಲಿಯುಗದ ಇಂದ್ರ .ರಾಮನ ಭಂಟ .ಏಳು ಚಿರಂಜೀವಿ ಪುರುಷರಲ್ಲಿ ಹನುಮನು ಕೂಡ ಒಬ್ಬನು .ವಿಷ್ಣುವಿನ ರಾಮ ಮತ್ತು ಕ್ರಷ್ಣ ಅವತಾರಗಳನ್ನು ಕಂಡವನು ಹನುಮ .ಅರ್ಜುನನ ರಥದ ಮೇಲಿದ್ದು ಶತ್ರುಗಳ ಎದೆಯಲ್ಲಿ ನಡುಕವನ್ನು ತಂದವನು ಹನುಮ .ಚಿಕ್ಕವನಿದ್ದಾಗ ಸೂರ್ಯದೇವನನ್ನು ಹಣ್ಣೆಂದು ಭಾವಿಸಿ ತಿನ್ನಲು ಹೊರಟವನು ಹನುಮ .ವಾಯುಪುತ್ರ ಹನುಮ ಭೀಮನ ಸಹೋದರ .ಪಾಂಡವರು ಯಾಗ ಮಾಡುವ ಸಂದರ್ಭದಲ್ಲಿ ಯುಧಿಷ್ಠಿರ ಭೀಮನಿಗೆ ಪುರುಷ ಮೃಗವನ್ನು ಕರೆತರಲು ಹೇಳುತ್ತಾನೆ .ಭೀಮ ಪುರುಷ ಮೃಗವನ್ನು ಹುಡುಕಿಕೊಂಡು ಹೋದಾಗ ಕೋತಿಯೊಂದು ದಾರಿಗೆ ಅಡ್ಡವಾಗಿ ಮಲಗಿತ್ತು .ಭೀಮನಿಗೆ ಬಲದಲ್ಲಿ ತನ್ನನ್ನು ಮೀರಿಸುವವರು ಯಾರು ಇಲ್ಲ ಎಂಬ ಅಹಂಭಾವ .ಭೀಮನ ಅಹಂಕಾರವನ್ನು ಮುರಿಯಲು ಆಂಜನೇಯ ವೃದ್ಧ ಕೋತಿಯ ರೂಪದಲ್ಲಿ ದಾರಿಗೆ ಅಡ್ಡವಾಗಿ ಮಲಗಿದ್ದ .ಭೀಮ ವೃದ್ಧ ಕೋತಿಯಲ್ಲಿ ದಾರಿ ಬಿಡಲು ಹೇಳಿದಾಗ ತನ್ನ ಬಾಲವನ್ನು ನೀನೆ ತೆಗೆದು ಪಕ್ಕಕ್ಕೆ ಸರಿಸಿ ಬಿಡು ಎನ್ನಲು ಭೀಮ ಕೋತಿಯ ಬಾಲವನ್ನು ಒಂದು ಇಂಚು ಕೂಡ ಸರಿಸಲು ಸಾಧ್ಯವಾಗದಿದ್ದಾಗ ತನ್ನ ತಪ್ಪಿನ ಅರಿವಾಗಿ ಕ್ಷಮೆ ಕೇಳಲು ಆಂಜನೇಯನು ತನ್ನ ನಿಜ ರೂಪವನ್ನು ತೋರಿಸಿದನು .ಪುರುಷ ಮೃಗ ಅತ್ಯಂತ ವೇಗವಾಗಿ ಓಡುವ ಪ್ರಾಣಿ ಮತ್ತು ಮನುಷರ ರೂಪವಿರುವ ಮೃಗ . ಪುರುಷ ಮೃಗವನ್ನು ನಿನ್ನ ರಾಜ್ಯಕ್ಕೆ ಕರೆದುಕೊಂಡು ಹೋಗಬೇಕಾದರೆ ನಾನು ನನ್ನ ರೋಮವನ್ನು ನಿನಗೆ ಕೊಡುತ್ತೇನೆ ಪುರುಷಮೃಗ ಅತಂತ ವೇಗವಾಗಿ ಹೋದಾಗ ಒಂದೊಂದು ರೋಮವನ್ನು ಭೂಮಿಗೆ ಹಾಕು ಅದು ಶಿವಲಿಂಗವಾಗಿ ಮಾರ್ಪಾಟಾಗುತ್ತದೆ ಅಲ್ಲಿ ಪುರುಷ ಮೃಗ ಶಿವಲಿಂಗದ ಪೂಜೆ ಮಾಡುತ್ತದೆ ಹೀಗೆ ಮುಂದೆ ಹೋಗುತ್ತಾ ಅದನ್ನು ಕರೆದುಕೊಂಡು ಹೋಗು ಎಂದನು .ಹೀಗೆ ಪುರುಷ ಮೃಗವನ್ನು ಭೀಮನು ಪಾಂಡವರ ರಾಜ್ಯಕ್ಕೆ ಕರೆದುಕೊಂಡು ಹೋಗುತ್ತಾನೆ .ಹನುಮನ ಪವಾಡಗಳು ಹಲವು . ಹನುಮ ಜಯಂತಿ ಹನುಮಂತ ಹುಟ್ಟಿದ ದಿನ .ಹನುಮಾನ್ ಚಾಲೀಸಾ ಪಠಣ ಎಲ್ಲ ಸಮಸ್ಯೆಗಳಿಗೂ ಪರಿಹಾರ . ಇನ್ನೊಂದು ಮಂತ್ರವಿದೆ ಅದು ಕೂಡ ಎಲ್ಲ ಮಂತ್ರಗಳಷ್ಟೇ ಶಕ್ತಿಯುತವಾದದ್ದು
ಸತ್ಯ ನ್ಯಾಯ ಧರ್ಮ ರಾಮ ರಾಮ ರಾಮ
ರಾಮ ರಾಮ ರಾಮ ಅವನ ಭಂಟ ಹನುಮ
ಪ್ರದೀಪ್ ಕುಮಾರ್ ,ಕೋಮುಂಜೆ

