Home » ಸಾಲಿಗ್ರಾಮದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ
 

ಸಾಲಿಗ್ರಾಮದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ

by Kundapur Xpress
Spread the love

ಕೋಟ : ಗೆಳೆಯರ ಬಳಗದ ಸಾಮಾಜಿಕ ಕಾರ್ಯ ನಿಜಕ್ಕೂ ಶ್ಲಾಘನೀಯ ಅಲ್ಲದೆ ಡಾ.ಶಿವರಾಮ ಕಾರಂತ ಹೆಸರಿನಲ್ಲಿ ಅರ್ಥಪೂರ್ಣ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ ಎಸ್ ಕಾರಂತ್ ನುಡಿದರು.
ಭಾನುವಾರ ಸಾಲಿಗ್ರಾಮ ಶ್ರೀ ದೇಗುಲದ ಜ್ಞಾನಮಂದಿರದಲ್ಲಿ ಗೆಳೆಯರ ಬಳಗ ಕಾರ್ಕಡ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಆಶ್ರಯದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಸಹಯೋಗದೊಂದಿಗೆ ಡಾ.ಕೋಟ ಶಿವರಾಮ ಕಾರಂತರ ಸ್ಮರಣಾರ್ಥ ಬೃಹತ್ ಉಚಿತ ಆರೋಗ್ಯಶಿಬಿರವನ್ನು ಉದ್ಘಾಟಿಸಿ ಮಾತನಾಡಿ ನೆಮ್ಮದಿಯ ಹಾಗೂ ಉಲ್ಲಾಸಭರಿತ ಜೀವನ ಸಾಗಿಸಬೇಕಾದರೆ ಆರೋಗ್ಯವಂತ ಜೀವನ ಅತ್ಯವಶ್ಯಕ ಆದರೆ ಇಂದಿನ ಕಾಲಘಟ್ಟದಲ್ಲಿ ನಮ್ಮ ಆಹಾರ ಕ್ರಮ ಹಾಗೂ ನಿರ್ಲಕ್ಷ÷್ಯ ಜೀವನ ಪದ್ಧತಿಯಿಂದ ನಾನಾ ರೀತಿಯ ರೋಗರುಜಿನಕ್ಕಿಡಾಗುತ್ತಿದ್ದೇವೆ ಇದರಿಂದ ಹೊರಬರಬೇಕಾದರೆ ನಮ್ಮ ಆರೋಗ್ಯವಂತ ಜೀವನ ಕ್ರಮಗಳನ್ನು ಅನುಸರಿಸಿಬೇಕು,
ಧಾರ್ಮಿಕ ಕೇಂದ್ರಗಳು ಧಾರ್ಮಿಕಕಾರ್ಯಕ್ಕೆ ಸೀಮಿತಗೊಳ್ಳದೆ ಸಾಮಾಜಿಕ,ಶೈಕ್ಷಣಿಕ ಕೈಂಕರ್ಯದಲ್ಲಿ ತೆರೆದಿಟ್ಟುಕೊಳ್ಳಬೇಕು ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ,ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ವಹಿಸಿ ಸ್ವಾಗತಿಸಿದರು.
ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮದ ಡಾ.ಶಿವರಾಮ ಕಾರಂತ ಸಂಶೋಧನಾ ಕೇಂದ್ರದ ಅಧ್ಯಕ್ಷ ಗುರುರಾಜ್ ರಾವ್ ಕೋಟೇಶ್ವರ, ಸಾಲಿಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ರಾಘವೇಂದ್ರ ರಾವ್,ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯರಾದ ಡಾ.ತೇಜಸ್,ಸಮ್ಮಿ÷್ಯಕ್ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಬಳಗದ ಉಪಾಧ್ಯಕ್ಷ ಶಶಿಧರ ಮಯ್ಯ ನಿರೂಪಿಸಿದರು.ಕಾರ್ಯದರ್ಶಿ ಶೀನ ಕಾರ್ಕಡ ವಂದಿಸಿದರು.
ಡಾ.ಕೋಟ ಶಿವರಾಮ ಕಾರಂತ ಸಂಶೋಧನಾ ಕೇಂದ್ರ ಸಾಲಿಗ್ರಾಮ, ಅಘೋರೇಶ್ವರ ಕಲಾರಂಗ ಕಾರ್ತಟ್ಟು,ಗಿರಿ ಫ್ರೆಂಡ್ಸ್ ಚಿತ್ರಪಾಡಿ,ಪಂಚವರ್ಣ ಸಂಘಟನೆ ಕೋಟ,ಕೂಟ ಮಹಾಜಗತ್ತುಸಾಲಿಗ್ರಾಮ ಅಂಗಸAಸ್ಥೆ ಮಹಿಳಾ ವೇದಿಕೆ ,ಯುವ ವೇದಿಕೆ ಸಾಲಿಗ್ರಾಮ, ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಸಹಕಾರ ನೀಡಿತು.

 

Related Articles

error: Content is protected !!