Home » ಜಿಲ್ಲೆಯಲ್ಲಿ ಭಾರಿ ಮಳೆ – ಹಲವೆಡೆ ಜಲಾವೃತ
 

ಜಿಲ್ಲೆಯಲ್ಲಿ ಭಾರಿ ಮಳೆ – ಹಲವೆಡೆ ಜಲಾವೃತ

by Kundapur Xpress
Spread the love

ಉಡುಪಿ : ಸೋಮವಾರ ರಾತ್ರಿಯ ಬಾರೀ ಜಡಿಮಳೆಗೆ ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, ಇತರ 40 ಮನೆಗಳಿಗೆ, 2 ಜಾನುವಾರು ಕೊಟ್ಟಿಗೆ ಮತ್ತು ಒಂದು ಶಾಲೆಗೆ ಭಾಗಶಃ ಹಾನಿಯಾಗಿದೆ. ಗೋಡೆ ಬಿದ್ದು ಒಬ್ಬ ಮಹಿಳೆಗೆ ಗಾಯಗಳಾಗಿವೆ. ಕುಂದಾಪುರ ತಾಲೂಕಿನ ‘ಬಸ್ರೂರು ಗ್ರಾಮದ ವೆಂಕಮ್ಮ ಅವರ ಮನೆಯ ಮೇಲೆ ಮರ ಬಿದ್ದು ಪೂರ್ಣ ಹಾನಿಗೊಂಡು ಸುಮಾರು 2 ಲಕ್ಷ ರೂ. ಮತ್ತು ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಹನುಮಂತ ಅವರ ಮನೆ ಗಾಳಿ ಮಳೆಗೆ ಧರಾಶಾಹಿಯಾಗಿದ್ದು 2 ಲಕ್ಷ ರೂ.ನಷ್ಟ ಅಂದಾಜಿಸಲಾಗಿದೆ.

ಕುಂದಾಪುರ ತಾಲೂಕು

ಕುಂದಾಪುರ ಮತ್ತು ಬ್ರಹ್ಮಾವರ ವರ ತಾಲೂಕುಗಳಲ್ಲಿಯೇ ಅತೀ ಹೆಚ್ಚಿನ ಹಾನಿ ಸಂಭವಿಸಿದೆ. ಕುಂದಾಪುರ ತಾಲೂಕಿನ ಸುಮಾರು 12 ಮನೆಗಳಿಗೆ ನಷ್ಟ ಸಂಭವಿಸಿದೆ. ಬ್ರಹ್ಮಾವರ ತಾಲೂಕಿನ 13 ಮನೆಗಳಿಗೆ ಹಾನಿಯಾಗಿದೆ.

ಬೈಂದೂರು ತಾಲೂಕು

ಬೈಂದೂರು ತಾಲೂಕಿನ 4 ಮನೆಗಳಿಗೆ, ಕಾಪು ತಾಲೂಕಿನ 7 ಮನೆಗಳಿಗೆ, ಹೆಬ್ರಿ ತಾಲೂಕಿನ 2 ಮನೆಗಳಿಗೆ ಮತ್ತು ಕಾರ್ಕಳ ತಾಲೂಕಿನ ಮನೆಗೆ ನಷ್ಟ ಉಂಟಾಗಿದೆ. ಬೈಂದೂರು ಗ್ರಾಮದ ಕನಕ ಹವಾಲ್ದಾರ್ ಅವರ ಜಾನುವಾರು ಕೊಟ್ಟಿಗೆಯ ಮೇಲೆ ಮರಬಿದ್ದು ಮತ್ತು ಕುಂದಾಪುರ ತಾಲೂಕಿನ ಹೆಸ್ತತೂರು ಗ್ರಾಮದ ಲಕ್ಷ್ಮೀನಾರಾಯಣ ಕೆದ್ಲಾಯ ಅವರ ಜಾನುವಾರು ಕೊಟ್ಟಿಗೆಗೆ ನಷ್ಟವಾಗಿದೆ. ಕುಂದಾಪುರ ತಾಲೂಕಿನ ಕುಳಂಜೆ ಗ್ರಾಮದ ಸ.ಹಿ.ಪ್ರಾ.ಶಾಲೆ ಆವರಣ ಗೋಡೆ ಮಳೆಗೆ ಕುಸಿದಿದೆ. ಹಾಲಾಡಿ ಗ್ರಾಮದ ಪಂಚಾಯತ್ ರಸ್ತೆಗೆ ನಿರ್ಮಿಸಲಾಗಿದ್ದ ಕಲ್ವರ್ಟ್ ತಡೆಗೋಡೆ ಭಾರಿ ಮಳೆಗೆ ಕೊಚ್ಚಿ ಹೋಗಿದೆ.

   

Related Articles

error: Content is protected !!