ಕುಂದಾಪುರ : ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಎಂ. ಬಿ. ಎ ವಿಭಾಗದ ISR ( Institutional Social Responsibility) ಕ್ಲಬ್ ಇದರ ಸಹಯೋಗದೊಂದಿಗೆ ಸುಮಾರು 60 ವಿದ್ಯಾರ್ಥಿಗಳ ಸಮ್ಮುಖದಲ್ಲಿ ಜನವರಿ 25ರಂದು ಉಡುಪಿಯ ಮಲ್ಪೆ ಕಡಲ ತೀರದಲ್ಲಿ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ “ಬೀಚ್ ಕ್ಲಿನಿಂಗ್ ಡ್ರೈವ್” ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಸಂಯೋಜಕರಾದ ಸಹಾಯಕ ಪ್ರಾಧ್ಯಾಪಕಿ ಪ್ರೊ. ತಿಲಕ ಲಕ್ಷ್ಮಿ, ಪ್ರೊ. ಚೈತಾಲಿ ಮತ್ತು ಪ್ರೊ. ಕಾವ್ಯ ಉಪಸ್ಥಿತರಿದ್ದರು.