279
ಕುಂದಾಪುರ: ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಬಿಜೆಪಿಯ ಮುಖಂಡರಾದ ಕಿಶೋರ್ ಕುಮಾರ್‌ರವರ ತಾಯಿ ಇಂದಿರಾ ಭಾಸ್ಕರ್ ಶನಿವಾರ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು ನಿವೃತ್ತ ಹೆಡ್ ಪೋಸ್ಟ್ ಮಾಸ್ಟರ್ ದಿ.ಭಾಸ್ಕರ್ ರಾವ್ ರವರ ಪತ್ನಿಯಾದ ಭವಾನಿ ಯಾನೆ ಇಂದಿರಾ ಭಾಸ್ಕರ್ ಇವರಿಗೆ 88 ವರ್ಷ ವಯಸ್ಸಾಗಿತ್ತು ಇವರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ ಮೃತರ ಅಂತಿಮ ದರ್ಶನ ಪಡೆದ ಕುಂದಾಪುರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ

