Home » ಜಯರಾಣಿ ಆಂಗ್ಲ ಮಾಧ್ಯಮ ಶಾಲೆ : ಗ್ರಾಜ್ಯುವೇಶನ್‌ ಡೇ
 

ಜಯರಾಣಿ ಆಂಗ್ಲ ಮಾಧ್ಯಮ ಶಾಲೆ : ಗ್ರಾಜ್ಯುವೇಶನ್‌ ಡೇ

by Kundapur Xpress
Spread the love

ಕುಂದಾಪುರ : ತಲ್ಲೂರಿನ ಜಯರಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯು ಕೆ ಜಿ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ  ನೆರವೇರಿತು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದ ಸಿಸ್ಟರ್ ಜೂಲಿ ಹಾಗೂ ಸಿಸ್ಟರ್ ಮೇರಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಸ್ತಾಂತರಿಸಿದರು

ಶಾಲಾ ವ್ಯವಸ್ಥಾಪಕರಾದ ಸಿಸ್ಟರ್ ಜೂಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ಶಿಸ್ತು ಸಂಸ್ಕೃತಿ ಸಂಪ್ರದಾಯವನ್ನು ಎಳವೇಯಲ್ಲೇ  ನೀಡುವ ಮೂಲಕ ಸೃಜನಶೀಲತೆ ಹಾಗೂ ಸಕಾರಾತ್ಮಕ ಚಿಂತನೆಯ ಬಗ್ಗೆ ಅರಿವನ್ನು ಮೂಡಿಸಬೇಕು ಎಂದು ನುಡಿದರು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಜೊತೆಗೆ ಪೋಷಕರ ಸಹಕಾರವಿದ್ದಾಗ ವಿದ್ಯಾರ್ಥಿಗಳು ಹಾಗೂ ಶಾಲೆಯ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವೆಂದು  ಮಕ್ಕಳಿಗೆ ಶುಭ ಹಾರೈಸಿದರು ಮುಖ್ಯ ಶಿಕ್ಷಕಿಯಾದ ಸಿಸ್ಟರ್ ಮೇರಿ ವಿದ್ಯಾರ್ಥಿಗಳಿಗೆ ಶುಭ  ಹಾರೈಸಿದರು

ಶಿಕ್ಷಕಿ ಸ್ವಾತಿ ಸ್ವಾಗತಿಸಿ ವಿದ್ಯಾರ್ಥಿ ಸಾಹಿತ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು ಈ ಸಮಾರಂಭದಲ್ಲಿ ಬೋಧಕ ಹಾಗೂ  ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು  ಕೊನೆಯಲ್ಲಿ ಎಲ್‌ಕೆಜಿ ಯುಕೆಜಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು

 

Related Articles

error: Content is protected !!