244
ಕುಂದಾಪುರ : ಪ್ರಜಾಪ್ರಭುತ್ವದ ತತ್ವಗಳನ್ನು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಪ್ರಜೆಗಳ ಜವಾಬ್ದಾರಿಯನ್ನು ಅರಿಯಲು ಅನುವಾಗಲು ತಲ್ಲೂರಿನ ಜಯರಾಣಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ಜರುಗಿತು.
ವಿದ್ಯಾರ್ಥಿ ನಾಯಕನಾಗಿ ಆಶ್ಲೇಷ ಎಸ್ ಕೊಟೇಗಾರ್ ಶಾಲಾ ನಾಯಕಿಯಾಗಿ ಶಾರ್ವಿ ಎಸ್ ಶೆಟ್ಟಿ ವಿದ್ಯಾರ್ಥಿಗಳಿಂದ ಭಾರಿ ಬಹುಮತದೊಂದಿಗೆ ಚುನಾಯಿತರಾದರು.
ಮತದಾನ ಪೂರ್ಣಗೊಂಡ ಬಳಿಕ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಿಸ್ಟರ್ ಜೂಲಿ ಶಾಲಾ ಮುಖ್ಯೋಪಧ್ಯಾಯರಾದ ಸಿಸ್ಟರ್ ಅವಿಲಾ ಉಪಸ್ಥಿತರಿದ್ದರು ಮುಖ್ಯ ಅತಿಥಿಯಾಗಿ ಸಿಸ್ಟರ್ ಝೀಟಾ ಆಗಮಿಸಿದ್ದರು ಸಂಧ್ಯಾ ಕಾರ್ಯಕ್ರಮ ನಿರೂಪಿಸಿ ಸ್ವಾತಿ ಎಸ್ ಧನ್ಯವಾದವಿತ್ತರು

